ಕರ್ನಾಟಕ

karnataka

ETV Bharat / city

ಚಲಿಸುತ್ತಿದ್ದ ಖಾಸಗಿ ಬಸ್​ನಲ್ಲಿ ಮಹಿಳೆ ಸಾವು

ಚಲಿಸುತ್ತಿದ್ದ ಖಾಸಗಿ ಬಸ್​ವೊಂದರಲ್ಲಿ ಮಹಿಳೆವೋರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ.

ಮಹಿಳೆ ಸಾವು

By

Published : Aug 28, 2019, 6:04 PM IST

ತುಮಕೂರು: ಚಲಿಸುತ್ತಿದ್ದ ಖಾಸಗಿ ಬಸ್​ವೊಂದರಲ್ಲಿ ಮಹಿಳೆವೋರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ನಡೆದಿದೆ.

ಸಿದ್ದಗಂಗಮ್ಮ ಮೃತಪಟ್ಟಿರುವ ಮಹಿಳೆ ಎಂದು ಗುರುತಿಸಲಾಗಿದ್ದು, ತುಂಬಾಡಿ ಗ್ರಾಮದವರೆಂದು ಪೊಲೀಸರಿಗೆ ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ತುಮಕೂರು ಮತ್ತು ಕೋಡಿಗೇನಹಳ್ಳಿ ನಡುವೆ ಸಂಚರಿಸುವ ಮಾರುತಿ ಕೃಪ ಬಸ್​​ನಲ್ಲಿ‌ ಈ ಮಹಿಳೆ ಸಂಚರಿಸುವ ವೇಳೆ ಬಸ್ ಸೀಟ್​​ನಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ಸ್ಥಳಕ್ಕೆ ಸಿಪಿಐ ದಯಾನಂದ್ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details