ಕರ್ನಾಟಕ

karnataka

ETV Bharat / city

ಕೊರೊನ ಶಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲು ಸಿಬ್ಬಂದಿ ಹಿಂದೇಟು: ಮೃತ ರೋಗಿಯ ಸಂಬಂಧಿಕರ ಆರೋಪ - ಕೋವಿಡ್​-19

ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಕೊರೊನಾ ಶಂಕಿತನಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ ಘಟನೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಒಬ್ಬ ರೋಗಿಯ ಜೀವ ಕಾಪಾಡಬೇಕಾದ ವೈದ್ಯರು ಈ ರೀತಿಯ ಬೇಜವಾಬ್ದಾರಿ ತನ ತೋರಿದ್ದು ನಿಜಕ್ಕೂ ವಿಪರ್ಯಾಸ.

tumkuru-district-hospital-doctor-refused-treat-a-corona-virus-suspect-patient
ತುಮಕೂರು ಜಿಲ್ಲಾ ಆಸ್ಪತ್ರೆ

By

Published : Apr 17, 2020, 12:12 PM IST

ತುಮಕೂರು:ಹೃದಯ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಕೊರೊನಾ ಶಂಕಿತನಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ ಘಟನೆ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ತೀರ್ಥಮಲ್ಲಪ್ಪ ಎಂಬುವವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ತುಮಕೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಹೃದಯ ಸಂಬಂಧಿ ಕಾಯಿಲೆ ಇದ್ದರಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆನಂತರ ಶ್ವಾಸಕೋಶ ತೊಂದರೆಯಿದೆ ಬೇರೆಡೆ ಕರೆದುಕೊಂಡು ಹೋಗುವಂತೆ ಸೂಚಿಸಿದರು.

ಕೊರೊನ ಶಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲು ಸಿಬ್ಬಂದಿ ಹಿಂದೇಟು

ನಂತರ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ಏಪ್ರಿಲ್ 15ಕ್ಕೆ ಕರೆದುಕೊಂಡು ಬರಲಾಯಿತು. ಅಲ್ಲದೆ ರೋಗಿಯಲ್ಲಿ ಜ್ವರ ಕಾಣಿಸಿಕೊಂಡ ಹಿನ್ನೆಲೆ ಕೋವಿಡ್​​ ಲಕ್ಷಣಗಳಿಂದ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅಲ್ಲಿ ಯಾವೊಬ್ಬ ವೈದ್ಯಕೀಯ ಸಿಬ್ಭಂದಿಯೂ ಸಹ ದಾಖಲಿಸಿಕೊಳ್ಳಲು ಮುಂದೆ ಬರಲಿಲ್ಲ ಎಂದು ಮೃತ ರೋಗಿಯ ಸಂಬಂಧಿ ಶಿವಕುಮಾರ ಆರೋಪಿಸಿದ್ದಾರೆ.

ಸುಮಾರು 1 ಗಂಟೆಗೂ ಹೆಚ್ಚು ಕಾಲ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೂ ಯಾರೂ ಚಿಕಿತ್ಸೆ ನೀಡಲಿಲ್ಲ, ಆಕ್ಸಿಜನ್​ ಕೊಟ್ಟು ಸುಮ್ಮನಾಗಿದ್ದರು. ಅಲ್ಲದೆ ಐಸಿಯುಗೆ ಕರೆದುಕೊಂಡು ಹೋಗಬೇಕಿದೆ ನೀನೆ ಕರೆದುಕೊಂಡು ಬಾ ಎಂದು ಹೇಳಿದ್ರು, ನಾನೇ ಸ್ವತಃ ತಳ್ಳುಗಾಡಿಯಲ್ಲಿ ಅವರನ್ನು ಮಲಗಿಸಿ ಐಸಿಯುಗೆ ಕರೆದುಕೊಂಡು ಹೋದೆ.

ನಂತರ ಅವರು ಅಲ್ಲಿಯೇ ಮೃತಪಟ್ಟರು. ಶವವನ್ನು ಶವಾಗಾರಕ್ಕೆ ಸಾಗಿಸುವಾಗಲು ಯಾರೂ ಇರಲಿಲ್ಲ, ಅಮೇಲೆ ಸಿಬ್ಬಂದಿಯೊಬ್ಬರ ಸಹಾಯ ಪಡೆದು ಇರಿಸಿದೆ. ಈ ಎಲ್ಲಾ ದೃಶ್ಯಾವಳಿಗಳು ಜಿಲ್ಲಾ ಸರಕಾರಿ ಆಸ್ಪತ್ರೆಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಈ ಕುರಿತಂತೆ ಈಗಾಗಲೇ ಸ್ಪಷ್ಟನೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಿಕಾ, ಮೃತ ರೋಗಿಯ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಏಪ್ರಿಲ್ 16ರಂದು ಕೋವಿಡ್ 19 ನೆಗೆಟಿವ್ ಎಂದು ವರದಿ ಬಂದಿದೆ. ಅಲ್ಲದೆ ತೀರ್ಥಮಲ್ಲಪ್ಪ ಅವರ ಸಾವು ಹೃದ್ರೋಗ ಸಮಸ್ಯೆಯಿಂದ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details