ಮೈಸೂರು: ತನ್ನ ಮಗು ಎದೆ ಹಾಲು ಕುಡಿಯುತ್ತಿಲ್ಲ ಎಂದು ಬೇಸರಗೊಂಡಿದ್ದ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಗುಂಡೂರಾವ್ ನಗರದಲ್ಲಿ ನಡೆದಿದೆ. ವೈದ್ಯೆ ಅರ್ಪಿತಾ ಆತ್ಮಹತ್ಯೆ ಮಾಡಿಕೊಂಡ ತಾಯಿ.
ಇವರು ಗುಂಡೂರಾವ್ ನಗರದಲ್ಲಿ ವಾಸವಿದ್ದು, ಕಳೆದ 5 ವರ್ಷಗಳ ಹಿಂದೆ ವೈದ್ಯ ವೃತ್ತಿ ಮಾಡುತ್ತಿದ್ದವರನ್ನೇ ಮದುವೆಯಾಗಿದ್ದರು. 4 ವರ್ಷಗಳ ನಂತರ ಮಗುವಾಗಿದ್ದು, ಆ ಮಗುವಿಗೆ ಈಗ 9 ತಿಂಗಳು. ಮಗು ಕಳೆದ 15 ದಿನಗಳಿಂದ ಎದೆ ಹಾಲು ಕುಡಿಯುತ್ತಿರಲಿಲ್ಲ ಎಂದು ತಾಯಿ ಅರ್ಪಿತಾ ಬೇಸರಗೊಂಡಿದ್ದರು. ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿದ್ದಾರೆ.