ಶಿವಮೊಗ್ಗ:ನಗರದ ಗಾಂಧಿ ಬಜಾರ್ನಲ್ಲಿ ಸೋಮವಾರ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕುವಿನಿಂದ ಇರಿದ ಪ್ರಕರಣದಲ್ಲಿ ಬಂಧಿತರಾದ ಮೂವರನ್ನು ಎರಡು ದಿನಗಳ ಅವಧಿಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ. ಐದನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಶಿವಕುಮಾರ್ ಅವರು ಆರೋಪಿಗಳಾದ ನದೀಮ್, ರೆಹಮಾನ್ ಹಾಗೂ ತನ್ವೀರ್ನನ್ನು ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದರು.
ಇದನ್ನೂ ಓದಿ:ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಹಲ್ಲೆ.. ಭದ್ರಾವತಿಯಲ್ಲಿ ಡಿಚ್ಚಿ ಮುಬಾರಕ್ನಿಂದ ಯುವಕನ ಮೇಲೆ ಹಲ್ಲೆ
ಆರೋಪಿಗಳನ್ನು ಐದು ದಿನ ವಶಕ್ಕೆ ನೀಡಿದರೆ ವಿಚಾರಣೆ ನಡೆಸಲು ಸಹಕಾರಿ ಆಗುತ್ತದೆ ಎಂದು ದೊಡ್ಡಪೇಟೆ ಪೊಲೀಸರು ಮನವಿ ಮಾಡಿದರು. ಆದರೆ, ನ್ಯಾಯಧೀಶರು ಕೇವಲ ಎರಡು ದಿನದಲ್ಲಿ ವಿಚಾರಣೆ ನಡೆಸಿ ಮುಗಿಸುವಂತೆ ಸೂಚಿಸಿದರು.