ಶಿವಮೊಗ್ಗ:144 ಸೆಕ್ಷನ್ ಜಾರಿ ನಡುವೆ ನಗರದ ಗಾಂಧಿ ಬಜಾರ್ನಲ್ಲಿ ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಪೊಲೀಸರು ಮನವಿ ಮಾಡಿದರು ಕೂಡಾ ಸಹಕರಿಸದ ವ್ಯಾಪಾರಿಗಳು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಗಿಳಿದ ಘಟನೆ ನಡೆದಿದೆ.
ಕೊರೊನಾ ಕಟ್ಟೆಚ್ಚರದ ನಡುವೆಯೂ ವ್ಯಾಪಾರ: ಮನವಿಗೆ ಬಗ್ಗದ ವ್ಯಾಪಾರಿಗಳಿಗೆ ಲಾಠಿ ಏಟು
ರಾಜ್ಯ ಸಂಪೂರ್ಣವಾಗಿ ಲಾಕ್ಡೌನ್ ಅಗಿದೆ. ಕೊರೊನಾ ಸೋಂಕು ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದ್ರೆ ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿಯ ನಡೆವೆಯೂ ವ್ಯಾಪಾರ ವಹಿವಾಟು ನಡೆಸುತ್ತಿದ್ದವರಿಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ.
ಶಿವಮೊಗ್ಗ ಲಾಕ್ ಡೌನ್
ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಸಹ ವ್ಯಾಪಾರಿಗಳು ಅಂಗಡಿಗಳ ಬಾಗಿಲು ತೆರೆದು ನಿರ್ಭಯವಾಗಿ ವ್ಯಾಪಾರ ವಹಿವಾಟು ನಡೆಸಿದ್ದರು. ಈ ಸಂದರ್ಭದಲ್ಲಿ ಅಂಗಡಿಗಳನ್ನು ಮುಚ್ಚುವಂತೆ ಅಧಿಕಾರಿಗಳು ಕೇಳಿಕೊಂಡರೆ ಅಧಿಕಾರಿಗಳ ಜೊತೆ ಮಳಿಗೆ ಮಾಲೀಕರು ಮಾತಿನ ಚಕಮಕಿ ನಡೆಸಿದರು. ನಂತರ ಜನರನ್ನು ಚದುರಿಸಲು ಅನಿವಾರ್ಯವಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು.