ಕರ್ನಾಟಕ

karnataka

ETV Bharat / city

ಶಿವಮೊಗ್ಗದಲ್ಲಿ ಹಾಫ್​ ಡೇ ಲಾಕ್​​ಡೌನ್​; ಅನಗತ್ಯ ಓಡಾಟಕ್ಕೆ ಪೊಲೀಸರಿಂದ ಕಡಿವಾಣ - ಶಿವಮೊಗ್ಗ ಹಾಫ್​ ಡೇ ಲಾಕ್​ಡೌನ್​

ಕೋವಿಡ್​​ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಶಿವಮೊಗ್ಗದಲ್ಲಿ ಹಾಫ್​ ಡೇ ಲಾಕ್​ಡೌನ್​ ಜಾರಿಗೊಳಿಸಲಾಗಿದ್ದು, ಅನವಶ್ಯಕವಾಗಿ ಓಡಾಡುತ್ತಿರುವ ವಾಹನ ಸವಾರರಿಗೆ ದಂಡ ವಿಧಿಸುವ ಮೂಲಕ ಪೊಲೀಸರು ಶಾಕ್​ ನೀಡಿದ್ದಾರೆ.

shivamogga-half-day-lock-down-impact
ಶಿವಮೊಗ್ಗ ಹಾಫ್​ ಢೇ ಲಾಕ್​ಡೌನ್

By

Published : Jul 16, 2020, 7:22 PM IST

ಶಿವಮೊಗ್ಗ: ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಹಾಫ್ ಡೇ ಲಾಕ್ ಡೌನ್ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಮಾಡಿದೆ.

ಶಿವಮೊಗ್ಗ ಹಾಫ್​ ಢೇ ಲಾಕ್​ಡೌನ್​ ಪರಿಣಾಮ

ಹಾಗಾಗಿ ಅನಗತ್ಯವಾಗಿ ಓಡಾಡುತ್ತಿದ್ದ ಸವಾರರ ವಾಹನಗಳನ್ನು ಪೊಲೀಸರು ಸೀಜ್​​ ಮಾಡಿ ದಂಡ ಹಾಕಿ ವಾರ್ನಿಂಗ್ ನೀಡಿದ್ದಾರೆ. ಕಾರಣ ಇಲ್ಲದೆ ಸಂಚರಿಸುತ್ತಿದ್ದ ಇಪ್ಪತ್ತಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದುಕೊಂಡು ದಂಡ ವಿಧಿಸಲಾಗಿದೆ. ಮಾಸ್ಕ್ ಹಾಕಿಕೊಳ್ಳದ ವಾಹನ ಸವಾರರಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಜಾಗೃತಿ ಮೂಡಿಸಲಾಯಿತು.

ನಗರದ ಆಲ್ಕೋಲಾ ಸರ್ಕಲ್​ನಲ್ಲಿ ಸಂಜೆ ಐದು ಗಂಟೆಯಾದರೂ ಜಿಲ್ಲಾಡಳಿತದ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಓಡಾಡುತ್ತಿದ್ದವರ ವಾಹನಗಳನ್ನು ವಶಕ್ಕೆ ಪಡೆಯುವ ಮೂಲಕ ಪೊಲೀಸರು ಸವಾರರಿಗೆ ಶಾಕ್ ನೀಡಿದರು.

ABOUT THE AUTHOR

...view details