ಕರ್ನಾಟಕ

karnataka

By

Published : Jul 17, 2020, 2:30 PM IST

ETV Bharat / city

ಶಿವಮೊಗ್ಗದಲ್ಲಿ ಪೊಲೀಸ್​​ ಇಲಾಖೆ ಇದೆಯೇ?: ಖಾಕಿಗೆ ಈಶ್ವರಪ್ಪ ತರಾಟೆ

ದುಷ್ಕರ್ಮಿಗಳು ಆಟೋ ಹಾಗೂ ಬೈಕ್​​​ಗೆ ಬೆಂಕಿ ಹಚ್ಚಿರುವ ಘಟನೆ ಶಿವಮೊಗ್ಗ ನಗರದ ಸಿಗೆಹಟ್ಟಿಯಲ್ಲಿ ರಾತ್ರಿ ನಡೆದಿದೆ. ಈ ಕುರಿತು ಮಾಹಿತಿ ಪಡೆದ ಸಚಿವ ಕೆ.ಎಸ್​.ಈಶ್ವರಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ ಆಟೋ ಮಾಲೀಕರಿಗೆ ಆರ್ಥಿಕ ನೆರವು ನೀಡಿದರು. ಇದೇ ವೇಳೆ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

minister ks Eswarappa visit to auto driver home in Shivamogga
ಆಟೋ ಮಾಲೀಕರ ಮನೆಗೆ ಭೇಟಿ ನೀಡಿದ ಸಚಿವ ಈಶ್ವರಪ್ಪ

ಶಿವಮೊಗ್ಗ:ನಗರದಲ್ಲಿ ಮಿತಿ ಮೀರಿದ ಅಕ್ರಮ ಮದ್ಯ ಮಾರಾಟ, ಗಾಂಜಾ ಹಾವಳಿ, ರೌಡಿಸಂನಂಥ ಕಾನೂನುಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕಲು ವಿಫಲರಾಗಿದ್ದೀರಾ?ಎಂದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​​ರಾಜ್​ ಇಲಾಖೆ ಸಚಿವ ಕೆ.ಎಸ್​.ಈಶ್ವರಪ್ಪ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ಸಿಗೆಹಟ್ಟಿಯಲ್ಲಿ ರಾತ್ರಿ ದುಷ್ಕರ್ಮಿಗಳ ತಂಡ ಆಟೋ ಹಾಗೂ ಬೈಕ್​​​ಗೆ ಬೆಂಕಿ ಹಚ್ಚಿ ಪರಾರಿಯಾಗಿತ್ತು. ಹಾಗಾಗಿ, ಸ್ಥಳಕ್ಕೆ ಭೇಟಿ ನೀಡಿ ಆಟೋ ಮಾಲೀಕರಿಗೆ ಸಚಿವರು ಆರ್ಥಿಕ ನೆರವು ನೀಡಿದ ಘೋಷಿಸಿದರು.

ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಮನೆಗೆ ಹೋಗಿ, ಬೇರೆಯವರನ್ನು ಕರೆತರುತ್ತೇವೆ. ನಗರದಲ್ಲಿ ರೌಡಿಸಂ, ಗಾಂಜಾ, ಅಕ್ರಮ ಮದ್ಯ ಮಾರಾಟ ಮೀತಿ ಮೀರುತ್ತಿದೆ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಪೊಲೀಸರೆಂದರೆ ಯಾರಿಗೂ ಭಯ ಇಲ್ಲದಂತಾಗಿದೆ. ಇನ್ನು ಮುಂದೆ ಇದನ್ನು ನಾನು ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.

ಆಟೋ ಮಾಲೀಕರ ಮನೆಗೆ ಭೇಟಿ ನೀಡಿದ ನಂತರ ಮಾತನಾಡಿದ ಸಚಿವ ಕೆ.ಎಸ್‌.ಈಶ್ವರಪ್ಪ

24 ಗಂಟೆಯೂ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಯಾಕೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ?. ಜನ ಸತ್ತ ಮೇಲೆ ಹೋಗುತ್ತೀರಾ? ಇದನ್ನು ನೋಡಿದರೆ, ಶಿವಮೊಗ್ಗದಲ್ಲಿ ಪೊಲೀಸ್​ ಇಲಾಖೆ ಇದೆಯೇ? ಎನಿಸುತ್ತದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details