ಕರ್ನಾಟಕ

karnataka

ಟಿಬೆಟಿಯನ್ನರ ಮೇಲೆ ಚೀನಾ ದಬ್ಬಾಳಿಕೆ ಖಂಡಿಸಿ ಪ್ರತಿಭಟನೆ

60 ವರ್ಷಗಳಿಂದ ಟಿಬೆಟಿಯನ್ನರು ಮಾನವ ಹಕ್ಕು, ಆರ್ಥಿಕ ಬಿಕ್ಕಟ್ಟು ಹಾಗೂ ಮಾನವೀಯ ನೆಲೆಗಳಿಂದ ವಂಚಿತರಾಗಿದ್ದಾರೆ. ಚೀನಾ ಟಿಬೆಟಿಯನ್ನರಿಗೆ ಬದುಕಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿ, ಟಿಬೆಟಿಯನ್ನರ ಮೇಲೆ ಚೀನಾ ದಬ್ಬಾಳಿಕೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

By

Published : Mar 10, 2019, 2:57 PM IST

Published : Mar 10, 2019, 2:57 PM IST

ಟಿಬೆಟಿಯನ್ನರ ಟಿಬೆಟಿಯನ್ನರ

ಮೈಸೂರು: ಟಿಬೆಟಿಯನ್ನರ ಮೇಲೆ ಚೀನಾ ದಬ್ಬಾಳಿಕೆ ಖಂಡಿಸಿ ಟಿಬೆಟಿಯನ್​ ಯುವ ಕಾಂಗ್ರೆಸ್, ಪ್ರಾಂತೀಯ ಟಿಬೆಟಿಯನ್ ಮಹಿಳಾ ಸಂಘಟನೆ, ಮೈಸೂರು ಟಿಬೆಟಿಯನ್ ಸಂಘಟನೆಗಳಿಂದ ಮೆರವಣೆಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಟಿಬೆಟಿಯನ್ನರ ಧರ್ಮಗುರು ದಲೈ ಲಾಮಾ ಅವರ ಅರಮನೆ ಹಾಗೂ ಪವಿತ್ರ ಸ್ಥಳವಾದ ಪೊಟಾಲಾ ಅರಮನೆ ಲಾಸಾ ಮೇಲೆ 1959ರಲ್ಲಿ ​ ಚೀನಿಯರು ನಡೆಸಿದ ಹೀನ ದಾಳಿಯ ವಿರುದ್ಧ ಟಿಬೆಟಿಯನ್ನರು ಬಂಡಾಯ ಮಾಡುತ್ತ 60 ನೇ ವರ್ಷ ಕಳೆದಿದೆ. ಚೀನಾ ಸರ್ಕಾರ ನಮ್ಮ ಸಾಂಸ್ಕೃತಿಕ, ರಾಜಕೀಯ , ಧಾರ್ಮಿಕ‌ ಹಾಗೂ ಭಾಷೆಯ ಭಾವನೆಗಳ ಮೇಲೆ ನಡೆಸಿದ ದಾಳಿ ದಮನಕಾರಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಬೆಟಿಯನ್ನರ ಟಿಬೆಟಿಯನ್ನರ

60 ವರ್ಷಗಳಿಂದ ಟಿಬೆಟಿಯನ್ನರು ಮಾನವ ಹಕ್ಕು, ಆರ್ಥಿಕ ಬಿಕ್ಕಟ್ಟು ಹಾಗೂ ಮಾನವೀಯ ನೆಲೆಗಳಿಂದ ವಂಚಿತರಾಗಿದ್ದಾರೆ. ಚೀನಾ ಟಿಬೆಟಿಯನ್ನರಿಗೆ ಬದುಕಲು ಅವಕಾಶ ಕೊಡಬೇಕು. ಸಮಸ್ಯೆಗಳ ಬಗ್ಗೆ ಚರ್ಚಿಸಲು ದಲೈ ಲಾಮಾ ಅವರ ಮಧ್ಯಸ್ಥಿಕೆ ಒಪ್ಪಿಕೊಳ್ಳಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

For All Latest Updates

TAGGED:

ABOUT THE AUTHOR

...view details