ಕರ್ನಾಟಕ

karnataka

ಅಕ್ರಮ ಗ್ರಾನೈಟ್ ಮಳಿಗೆಗಳಿಗೆ ಬಿಸಿ ಮುಟ್ಟಿಸಲು ಮುಂದಾದ ನಂಜನಗೂಡು ತಾಲೂಕಾಡಳಿತ

ನಂಜನಗೂಡು ತಾಲೂಕಿನ ತಾಂಡವಪುರ ಗ್ರಾ.ಪಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಅಕ್ರಮ ಗ್ರಾನೈಟ್ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನೀಡಿದ್ದ ಆದೇಶಕ್ಕೆ 7 ವರ್ಷಗಳ ನಂತರ ಕಿಮ್ಮತ್ತು ಸಿಕ್ಕಿದೆ.

By

Published : Aug 5, 2021, 10:45 AM IST

Published : Aug 5, 2021, 10:45 AM IST

Illegal Granite Stores
ಅಕ್ರಮ ಗ್ರಾನೈಟ್ ಮಳಿಗೆಗಳು

ಮೈಸೂರು: ಏಳು ವರ್ಷಗಳ ಬಳಿಕ ನಂಜನಗೂಡು ತಾಲೂಕು ಆಡಳಿತ ಎಚ್ಚೆತ್ತಿದ್ದು, ಅಕ್ರಮ ಗ್ರಾನೈಟ್ ಮಳಿಗೆಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.

ಅಕ್ರಮ ಗ್ರಾನೈಟ್ ಮಳಿಗೆಗಳ ಕುರಿತು ತಹಶೀಲ್ದಾರ್ ಪ್ರತಿಕ್ರಿಯೆ

ನಂಜನಗೂಡು ತಾಲೂಕಿನ ತಾಂಡವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳ ಕೃಷಿ ಜಮೀನುಗಳಲ್ಲಿ ಅನ್ಯಕ್ರಾಂತ ಮಾಡಿಸದೆ ಅನಧಿಕೃತವಾಗಿ ಗ್ರಾನೈಟ್ ವಹಿವಾಟುಗಳು ನಡೆಯುತ್ತಿದ್ದವು. ಇವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಾಂಡವಪುರ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ 2014ರಲ್ಲಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದರು.

2014ರ ಜುಲೈ 18ರಂದು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶದ ಪ್ರತಿ

ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯ ಪತ್ರಕ್ಕೆ ಮನ್ನಣೆ ನೀಡಿದ್ದ ಅಂದಿನ ಜಿಲ್ಲಾಧಿಕಾರಿ, 2014ರ ಜುಲೈ 18ರಂದು ನಂಜನಗೂಡು ತಹಶೀಲ್ದಾರ್​ಗೆ ವರದಿ ನೀಡುವಂತೆ ಸೂಚಿಸಿದ್ದರು. ಜಿಲ್ಲಾಧಿಕಾರಿಗಳ ಪತ್ರಕ್ಕೆ ಕಿಮ್ಮತ್ತು ನೀಡದ ಕಾರಣ ಕ್ರಮ ಕೈಗೊಳ್ಳುವ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಇದೀಗ ತಹಶೀಲ್ದಾರ್ ಮೋಹನ ಕುಮಾರಿ ಅನಧಿಕೃತ ಗ್ರಾನೈಟ್ ಕೇಂದ್ರಗಳ ಮೇಲೆ ಕಾನೂನು ಸಮರ ನಡೆಸಲು ತಯಾರಿ ನಡೆಸಿದ್ದಾರೆ.

ಗ್ರಾನೈಟ್ ವಹಿವಾಟು ನಡೆಸುತ್ತಿರುವ ಮಾಲೀಕರುಗಳಿಗೆ ನೋಟಿಸ್ ಜಾರಿ ಮಾಡಿದ್ದು, ಶೀಘ್ರದಲ್ಲೇ ಈ ಕುರಿತಾಗಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ರಾಜ್ಯಕ್ಕೆ ಯಾರೇ ಸಚಿವರಾದರೂ ಜನರಿಗೆ ಪ್ರಯೋಜನವಿಲ್ಲ: ರಾಮಲಿಂಗಾರೆಡ್ಡಿ

ABOUT THE AUTHOR

...view details