ಮೈಸೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಸ್ವಚ್ಛ ಸರ್ವೇಕ್ಷಣ 2021ರ(Swachh Survekshan Awards 2021) ಅನ್ವಯ ದೇಶದ 342 ನಗರಗಳಿಗೆ ಪ್ರಶಸ್ತಿ ಘೋಷಿಸಿ, ಪ್ರಧಾನ ಮಾಡಿದ್ದಾರೆ. ಮೈಸೂರಿಗೆ 5 ಸ್ಟಾರ್ ರ್ಯಾಂಕಿಂಗ್(5 star ranking city) ಪಟ್ಟ ಸಿಕ್ಕಿದೆ.
ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ವಿಜೇತ ನಗರಗಳ ಹೆಸರನ್ನು ಘೋಷಿಸಿದರು. ಸತತ 5ನೇ ಬಾರಿಗೆ ಇಂದೋರ್ ಸ್ವಚ್ಛ ನಗರಿ ಪಟ್ಟವನ್ನು ಅಲಂಕರಿಸಿದೆ.ಸೂರತ್ ಮತ್ತು ವಿಜಯವಾಡ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಅಲಂಕರಿಸಿದೆ. ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛ ರಾಜ್ಯಗಳ ಸರ್ವೇಯಲ್ಲಿ ಛತ್ತೀಸ್ಗಡ ಮೊದಲ ಸ್ಥಾನ ಪಡೆದಿದೆ. ಹಾಗೆಯೇ ಗಂಗಾ ನದಿ ಪಾತ್ರದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ವಾರಾಣಸಿ ಮೊದಲ ಸ್ಥಾನ ಪಡೆದಿದೆ.