ಕರ್ನಾಟಕ

karnataka

ETV Bharat / city

ಅಕ್ರಮ ರೆಮ್​ಡಿಸಿವಿರ್ ಮಾರಾಟ :​ ಶಾಸಕ‌ ಪುಟ್ಟರಂಗ ಶೆಟ್ಟಿ ಸಹೋದರನ ಪುತ್ರನ ಬಂಧನ - ಮೈಸೂರು ಅಕ್ರಮ ರೆಮ್​ಡಿಸಿವಿರ್​​ ಮಾರಾಟ

ಕೋವಿಡ್ ಸೋಂಕಿತರಿಗೆ ನೀಡಲಾಗುವ ರೆಮ್​ಡಿಸಿವಿರ್​​​ ಚುಚ್ಚುಮದ್ದನ್ನು ಕದ್ದು ಹೆಚ್ಚಿನ‌ ಬೆಲೆಗೆ ಮಾರುತ್ತಿದ್ದರು. ಮೂವರು ಆರೋಪಿಗಳಿಂದ 7 ಸಾವಿರ ರೂ‌.ನಗದು ಹಣ ಹಾಗೂ 4 ಇಂಜೆಕ್ಷನ್ ವಶಪಡಿಸಿಕೊಳ್ಳಲಾಗಿದೆ..

mla-puttarangashetti-brother-son-arrested-in-illegal-remdesivir-selling-case
ಶಾಸಕ‌ ಪುಟ್ಟರಂಗ ಶೆಟ್ಟಿ ಸಹೋದರನ ಪುತ್ರ

By

Published : May 16, 2021, 3:13 PM IST

ಮೈಸೂರು : ಜಿಲ್ಲೆಯಲ್ಲಿ ರೆಮ್​​ಡಿಸಿವಿರ್ ಕಳ್ಳರ ಹಾವಳಿ ಹೆಚ್ಚಾಗಿದೆ. ಎರಡು ದಿನದಲ್ಲಿ 7 ಮಂದಿಯನ್ನು ಬಂಧಿಸಿ, 12 ಚುಚ್ಚು ಮುದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಉಪ್ಪಿನಮೊಳೆ ನಿವಾಸಿ, ಶಾಸಕ‌ ಪುಟ್ಟರಂಗ ಶೆಟ್ಟಿ ಸಹೋದರನ ಪುತ್ರ ಜಿ.ಸುರೇಶ್​​, ಕೆ.ಆರ್.ನಗರ ತಾಲೂಕು ದಗ್ಗನಹಳ್ಳಿ ನಿವಾಸಿ ಡಿ.ಎಂ.ರಾಘವೇಂದ್ರ, ಹಾಸನ ಜಿಲ್ಲೆ ಅರಕಲಗೂಡು ತಾಲೂಕು ರಾಮನಕೊಪ್ಪಲು ನಿವಾಸಿ ಆಶೋಕ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಜಿ. ಸುರೇಶ್​​​ ಮೈಸೂರಿನ ಜೆಪಿ‌ ನಗರದ ಕಾಮಾಕ್ಷಿ ಆಸ್ಪತ್ರೆಯ ಸ್ಟಾಫ್‌ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ.

ಕೋವಿಡ್ ಸೋಂಕಿತರಿಗೆ ನೀಡಲಾಗುವ ರೆಮ್​ಡಿಸಿವಿರ್​​​ ಚುಚ್ಚುಮದ್ದನ್ನು ಕದ್ದು ಹೆಚ್ಚಿನ‌ ಬೆಲೆಗೆ ಮಾರುತ್ತಿದ್ದರು. ಮೂವರು ಆರೋಪಿಗಳಿಂದ 7 ಸಾವಿರ ರೂ‌.ನಗದು ಹಣ ಹಾಗೂ 4 ಇಂಜೆಕ್ಷನ್ ವಶಪಡಿಸಿಕೊಳ್ಳಲಾಗಿದೆ.

ಮತ್ತೆರಡು ಪ್ರಕರಣದಲ್ಲಿ ನಾಲ್ವರು ಸ್ಟಾಫ್ ನರ್ಸ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 8 ರೆಮ್​ಡಿಸಿವಿರ್​​ ಔಷಧಿ ವಶಪಡಿಸಿಕೊಳ್ಳಲಾಗಿದೆ.

ABOUT THE AUTHOR

...view details