ಕರ್ನಾಟಕ

karnataka

ETV Bharat / city

ಸಿದ್ದರಾಮಯ್ಯನವರನ್ನ ಮನವೊಲಿಸೋ ತೆವಲು ನನಗ್ಯಾಕೆ ರೀ.. ಅದರ ಅವಶ್ಯಕತೆ ನಮ್ಗಿಲ್ಲ : ಕೆ ಎಸ್ ಈಶ್ವರಪ್ಪ

ಮಠಾಧೀಶರನ್ನು ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮಠಾಧೀಶರು ತೋರಿಸುತ್ತಿರುವ ಮಾರ್ಗದಲ್ಲಿಯೇ ನಾವೆಲ್ಲ ಹೋಗುತ್ತಿದ್ದೇವೆ. ಕುರುಬರನ್ನು ಯಾರಿಂದಲೂ ಇಬ್ಭಾಗ ಮಾಡಲು ಸಾಧ್ಯವಿಲ್ಲ. ಕುರುಬ ಸಮುದಾಯವನ್ನು ಎಸ್​​ಟಿಗೆ ಸೇರಿಸಲು ಯಾರ ವಿರುದ್ಧವೂ ಹೋರಾಟ ಮಾಡುತ್ತಿಲ್ಲ..

Minister K.S. Ishwarappa statement
ಸಚಿವ ಕೆ.ಎಸ್. ಈಶ್ವರಪ್ಪ

By

Published : Dec 29, 2020, 12:14 PM IST

ಮೈಸೂರು :ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಸಹಕಾರ ನೀಡುತ್ತಿಲ್ಲವೆಂದು ಮನವೊಲಿಸುವ ಅವಶ್ಯಕತೆ ನಮಗಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮುದಾಯದ ಮೇಲೆ ಯಾರಿಗೆ ನಂಬಿಕೆಯಿದೆ, ಆಸಕ್ತಿ ಇದೆ ಅವರೆಲ್ಲ ಬರುತ್ತಾರೆ. ಸಿದ್ದರಾಮಯ್ಯನವರ ಮನವೊಲಿಸುವ ಅಗತ್ಯವಿಲ್ಲ. ಅವರಿಗೆ ಅಪೇಕ್ಷೆಯಿದ್ದರೆ ಬರ್ತಾರೆ. ರಾಜ್ಯದಲ್ಲಿ ಕೋಟ್ಯಂತರ ಜನರಿದ್ದಾರೆ, ಅವರನ್ನೆಲ್ಲ ಮನವೊಲಿಸಲು ಆಗುತ್ತಾ? ನಮ್ಮ ಹಿಂದೆ ಸ್ವಾಮೀಜಿಗಳಿದ್ದಾರೆ. ಹೋರಾಟದಲ್ಲಿ ಯಶಸ್ವಿಯಾಗಲಿದ್ದೇವೆ ಎಂಬ ನಂಬಿಕೆಯಿದೆ ಎಂದರು.

ಸಚಿವ ಕೆ.ಎಸ್. ಈಶ್ವರಪ್ಪ

ಓದಿ:ಭಾರತದಲ್ಲಿ 6 ಮಂದಿಗೆ ರೂಪಾಂತರಗೊಂಡ ಕೊರೊನಾ ವೈರಸ್: ಕರ್ನಾಟಕದ ಮೂವರಲ್ಲಿ ಸೋಂಕು

ಮಠಾಧೀಶರನ್ನು ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮಠಾಧೀಶರು ತೋರಿಸುತ್ತಿರುವ ಮಾರ್ಗದಲ್ಲಿಯೇ ನಾವೆಲ್ಲ ಹೋಗುತ್ತಿದ್ದೇವೆ. ಕುರುಬರನ್ನು ಯಾರಿಂದಲೂ ಇಬ್ಭಾಗ ಮಾಡಲು ಸಾಧ್ಯವಿಲ್ಲ. ಕುರುಬ ಸಮುದಾಯವನ್ನು ಎಸ್​​ಟಿಗೆ ಸೇರಿಸಲು ಯಾರ ವಿರುದ್ಧವೂ ಹೋರಾಟ ಮಾಡುತ್ತಿಲ್ಲ.

ಸಮುದಾಯದಲ್ಲಿ ಜನಜಾಗೃತಿ ಮೂಡಿಸುತ್ತಿದ್ದೇವೆ. ಸ್ವಾತಂತ್ರ್ಯ ಪೂರ್ವದಲ್ಲಿ ಕುರುಬರಿಗೆ ಎಸ್‌ಟಿ ಮೀಸಲಾತಿ ಇತ್ತು ಎಂಬ ದಾಖಲೆಗಳಿವೆ ಎಂದು ಹೇಳುತ್ತಾರೆ. ಇದರ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದರು.

ಇದೇ ವೇಳೆ ಆತ್ಮಹತ್ಯೆಗೆ ಶರಣಾಗಿರೋ ವಿಧಾನ ಪರಿಷತ್ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.

ABOUT THE AUTHOR

...view details