ಮೈಸೂರು:ಕೆಆರ್ಎಸ್ ಜಲಾಶಯದ ಸುತ್ತಮುತ್ತ ಯಾವುದೇ ರೀತಿಯ ಸ್ಫೋಟ ನಡೆಸಿದರು ಅಣೆಕಟ್ಟೆಗೆ ಅಪಾಯವಿದ್ದು, ಟ್ರಯಲ್ ಬ್ಲಾಸ್ಟ್ ಮಾಡುವುದರಿಂದ ಸಹಾ ಅಪಾಯವಿದೆ. ಡ್ಯಾಮ್ನ ಸುತ್ತಮುತ 25 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿ ಸ್ಫೋಟಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಕೆಆರ್ಎಸ್ ನಿರ್ಮಾಣವಾಗಿ 91 ವರ್ಷವಾಗಿದ್ದು, ಮನುಷ್ಯನಂತೆಯೇ ಜಲಾಶಯಗಳಿಗೂ ಇಂತಿಷ್ಟು ವರ್ಷ ಆಯಸ್ಸು ಇರುತ್ತದೆ. ಕೆಆರ್ಎಸ್ ಒಂದು ಬಂಡೆಯ ಮೇಲೆ ನಿರ್ಮಾಣವಾಗಿದ್ದು, ಎಲ್ಲೇ ಸುತ್ತಮುತ್ತ ಸ್ಫೋಟವಾದರು ಅಣೆಕಟ್ಟೆ ಕೆಲವು ಸೆಕೆಂಡ್ ಕಂಪನದ ಅನುಭವವಾಗುತ್ತದೆ ಎಂದು ವೈಜ್ಞಾನಿಕವಾಗಿ ದೃಢವಾಗಿದೆ. ಈಗ ಕೆಆರ್ಎಸ್ ಸಂಪೂರ್ಣ ಭರ್ತಿಯಾಗಿದ್ದು, ಇಂತಹ ಸಂದರ್ಭದಲ್ಲಿ ಪರಿಕ್ಷಾರ್ಥ ಸ್ಫೋಟದ ಪ್ರಯೋಗಕ್ಕೆ ವಿಜ್ಞಾನಿಗಳು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.
ಕೆಆರ್ಎಸ್ ಜಲಾಶಯದ ಸುತ್ತಮುತ್ತ ಯಾವುದೇ ರೀತಿ ಸ್ಫೋಟ ನಡೆದರೂ ಡ್ಯಾಂಗೆ ಅಪಾಯ ಬಿ ವೈ ವಿಜಯೇಂದ್ರನಿಗೆ ಟಿಕೇಟ್ ನೀಡುವುದಿಲ್ಲ: ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಯೂಸ್ ಅಂಡ್ ತ್ರೂ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಅವರನ್ನು ಬಳಸಿಕೊಂಡು ಬಿಸಾಕುತ್ತಾರೆ, ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಹೆಸರನ್ನು ಬಳಸಿಕೊಳ್ಳುತ್ತಾರೆ. ಅವರ ಮಗ ಬಿ ವೈ ವಿಜಯೇಂದ್ರನಿಗೆ ಟಿಕೆಟ್ ನೀಡುವುದಿಲ್ಲ ಇದನ್ನು ವೀರಶೈವರು ಅರ್ಥಮಾಡಿಕೊಳ್ಳಬೇಕು ಎಂದರು.
ಸಂಸದ ಪ್ರತಾಪ್ ಸಿಂಹ ವಿರುದ್ಧ ನಾನು ಮಾಡಿದ ಪ್ರತಿಭಟನೆಗಳಿಗೆ ಮೈಸೂರಿನ ವಿವಿಧ ಠಾಣೆಗಳಲ್ಲಿ 8 ರಿಂದ 10 ಪ್ರಕರಣಗಳು ದಾಖಲಾಗಿದ್ದು, ಜೊತೆಗೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಪ್ರತಾಪ್ ಸಿಂಹ ನನ್ನನ್ನು ಹೆದರಿಸುತ್ತಾರೆ. ಅವರು ಪೊಲೀಸ್ ಠಾಣೆಗೆ ಹೋಗುವ ಬದಲು ನ್ಯಾಯಾಲಯಕ್ಕೆ ಹೋಗಿ ಪ್ರಶ್ನೆ ಮಾಡಲಿ ಎಂದು ಲಕ್ಷ್ಮಣ್ ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ :ಕಾಂಗ್ರೆಸ್ ಪ್ರತಿಭಟನಾ ವೇದಿಕೆಗೆ ಆಗಮಿಸಿದ್ದ ನಟಿ ಭಾವನಾಗೆ ಕಾರ್ಯಕರ್ತರಿಂದ ತರಾಟೆ