ಕರ್ನಾಟಕ

karnataka

ಕೊರೋನಾ ಭೀತಿ: ಇನ್ಫೋಸಿಸ್ ತರಬೇತಿ ಟೆಕ್ಕಿಗಳು ಮರಳಿ ಊರಿಗೆ...

ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟಲು ಇನ್ಫೋಸಿಸ್ ಕ್ರಮ ತೆಗೆದುಕೊಂಡಿದ್ದು, ಸಂಸ್ಥೆಯಲ್ಲಿ ತರಬೇತಿಗೆ ಬಂದಿರುವ ಟೆಕ್ಕಿಗಳನ್ನು ಅವರ ತವರಿಗೆ ಕಳುಹಿಸುತ್ತಿದೆ.

By

Published : Mar 19, 2020, 4:57 PM IST

Published : Mar 19, 2020, 4:57 PM IST

infosys-reaches-back-to-training-techies
ಇನ್ಫೋಸಿಸ್ ತರಬೇತಿ ಟೆಕ್ಕಿಗಳು ಮರಳಿ ಊರಿಗೆ

ಮೈಸೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇನ್ಫೋಸಿಸ್ ಸಂಸ್ಥೆಯಲ್ಲಿ ತರಬೇತಿ ನಿರತರಾಗಿರುವ 4,000 ಟೆಕ್ಕಿಗಳು ಹಂತ ಹಂತವಾಗಿ ಊರಿಗೆ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ.

ಐಟಿ ಬಿಟಿ, ಕಾರ್ಪೊರೇಟ್ ಕಂಪನಿಗಳು ಸೇರಿದಂತೆ ಹಲವು ಕಂಪನಿಗಳು ಉದ್ಯಮಿಗಳನ್ನು ಅವರವರ ಊರಿಗೆ ಕಳುಹಿಸುತ್ತಿವೆ. ಅದರಂತೆ ಇನ್ಫೋಸಿಸ್​​​ನಲ್ಲಿ ಗ್ಲೋಬಲ್ ಎಜುಕೇಶನ್ ಸೆಂಟರ್​​​​ನಲ್ಲಿ ತರಬೇತಿ ನಿರತರಾಗಿರುವ 4000 ಟೆಕ್ಕಿಗಳನ್ನು ಹಂತಹಂತವಾಗಿ ಊರಿಗೆ ಕಳುಹಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ.

ಇದಕ್ಕಾಗಿಯೇ ಕೆಎಸ್​​ಆರ್​ಟಿಸಿ 20 ಬಸ್​​ಗಳನ್ನು ಒದಗಿಸಿದ್ದು, ಬಸ್​ಗಳು ಪುಣೆ, ಹೈದರಾಬಾದ್, ಸಿಕಂದರಾಬಾದ್, ಚೆನ್ನೈ, ಬೆಂಗಳೂರು, ಮಂಗಳೂರು, ಕೆಂಪೇಗೌಡ ವಿಮಾನ ನಿಲ್ದಾಣ, ಕೇರಳ ಕೊಟ್ಟಾಯಂ, ತಿರುವನಂತಪುರಂ ಸೇರಿದಂತೆ ಹಲವು ಕಡೆಗಳಿಗೆ ಸಂಚರಿಸುತ್ತಿವೆ.

ABOUT THE AUTHOR

...view details