ಕರ್ನಾಟಕ

karnataka

ETV Bharat / city

ಮೈಸೂರು: ಚಿರತೆ ದಾಳಿಯಿಂದ ರೈತನಿಗೆ ಗಂಭೀರ ಗಾಯ - ರೈತನ ಮೇಲೆ ಚಿರತೆ ದಾಳಿ

ಬೀರಂಬಳ್ಳಿ ಗ್ರಾಮದ ಸಿದ್ದಪ್ಪ ತಮ್ಮ ಬಾಳೆ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಚಿರತೆಯೊಂದು ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

farmer injured by leopard attack at Mysore
ಚಿರತೆ ದಾಳಿಯಿಂದ ರೈತನಿಗೆ ಗಂಭೀರ ಗಾಯ

By

Published : Nov 18, 2021, 3:01 PM IST

ಮೈಸೂರು: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತನ ಮೇಲೆ‌ ಚಿರತೆಯೊಂದು ದಾಳಿ ಮಾಡಿ (Leopard attack on farmer in Mysuru) ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನಲ್ಲಿ ನಡೆದಿದೆ.


ಬೀರಂಬಳ್ಳಿ ಗ್ರಾಮದ ಸಿದ್ದಪ್ಪ (48) ಗಾಯಾಳು ರೈತ‌. ತಮ್ಮ ಬಾಳೆ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಚಿರತೆ ಹಠಾತ್ ದಾಳಿ ನಡೆಸಿದೆ. ಈ ವೇಳೆ ರೈತ ಚೀರಾಡಿದ್ದು, ಚಿರತೆ ಕಾಲ್ಕಿತ್ತಿದೆ. ಸಿದ್ದಪ್ಪನ ತಲೆ, ಮೂಗು, ತೊಡೆಗಳಲ್ಲಿ ಗಂಭೀರ ಗಾಯವಾಗಿದೆ. ಹೆಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮೈಸೂರಿನ ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿ:ಶಾರ್ಟ್ ಸರ್ಕ್ಯೂಟ್​​​ನಿಂದ ಬೆಂಕಿ: ಮಳೆಯ ನಡುವೆಯೂ ಹೊತ್ತಿ ಉರಿದ ಡಾಬಾ

ABOUT THE AUTHOR

...view details