ಕರ್ನಾಟಕ

karnataka

ETV Bharat / city

ಈ ಬಾರಿ ನವರಾತ್ರಿ ಅಷ್ಟರಾತ್ರಿಗೆ ಸೀಮಿತ: ಶಶಿಶೇಖರ್ ದೀಕ್ಷಿತ್

ದಸರಾ ಮಹೋತ್ಸವ 9 ರಾತ್ರಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ಆರಾಧನೆಯೊಂದಿಗೆ ಜರುಗುವುದು ಸಂಪ್ರದಾಯ. ಆದರೆ ಈ ಬಾರಿ ತಿಥಿಗಳ ಮೇಲೆ ತಿಥಿ (ಉಪರಿ) ಬಂದಿರುವುದರಿಂದ ಕೇವಲ 8 ರಾತ್ರಿ ಮಾತ್ರ ಆಚರಿಸಬೇಕಾಗಿದೆ ಎಂದು ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಹೇಳಿದರು.

Mysore
ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್

By

Published : Sep 16, 2021, 6:12 PM IST

ಮೈಸೂರು:ಈ ಬಾರಿಯ ನವರಾತ್ರಿ ಉತ್ಸವ ಅಷ್ಟರಾತ್ರಿಗೆ ಸೀಮಿತವಾಗಿದೆ. ಪೂಜೆ-ಪುನಸ್ಕಾರಗಳಲ್ಲಿ ಯಾವುದೇ ಲೋಪವಿರುವುದಿಲ್ಲ. ನವರಾತ್ರಿ ಸಂಪ್ರದಾಯದಂತೆ ಪೂಜಾ ಕೈಂಕರ್ಯಗಳು ನಡೆಯಲಿದೆ ಎಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಹೇಳಿದ್ದಾರೆ.

ಈ ಬಾರಿ ನವರಾತ್ರಿ ಅಷ್ಟರಾತ್ರಿಗೆ ಸೀಮಿತ: ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಮಾಹಿತಿ

ಮೈಸೂರು ದಸರಾ ಮಹೋತ್ಸವ 9 ರಾತ್ರಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ಆರಾಧನೆಯೊಂದಿಗೆ ಜರುಗುವುದು ಸಂಪ್ರದಾಯ. ಆದರೆ ಈ ಬಾರಿ ತಿಥಿಗಳ ಮೇಲೆ ತಿಥಿ (ಉಪರಿ) ಬಂದಿರುವುದರಿಂದ ಕೇವಲ 8 ರಾತ್ರಿ ಮಾತ್ರ ಆಚರಿಸಬೇಕಾಗಿದೆ. ಅಕ್ಟೋಬರ್ 7 ರಿಂದ 15 ರವರೆಗೆ ಬರುವ ರಾತ್ರಿಗಳ ಪೈಕಿ ಒಂದೇ ದಿನ ಎರಡು ತಿಥಿಗಳು ಬರುವುದರಿಂದ ದೇವಿಯ ಪೂಜೆ 8 ರಾತ್ರಿಗಳಿಗೆ ಮಾತ್ರ ಸೀಮಿತವಾಗಲಿದೆ ಎಂದು ತಿಳಿಸಿದರು.

ಶರನ್ನವರಾತ್ರಿಯ ಮೊದಲ ದಿನವಾದ ಅಕ್ಟೋಬರ್ 7 ರಂದು ಪಾಡ್ಯದ ದಿನ ಶೈಲಾವ್ರತ, 8 ರಂದು ಬ್ರಹ್ಮಚಾರಿಣಿ ಪೂಜೆ, 9 ರಂದು ಚಂದ್ರಘಂಟಾ ಮತ್ತು ನಾಲ್ಕನೇ ದಿನದ ಕೂಷ್ಮಾಂಡಾ ಪೂಜೆಯನ್ನು ಒಟ್ಟಿಗೆ ಮಾಡಲಾಗುತ್ತದೆ. ಹಾಗೆಯೇ 10 ರಂದು ಚತುರ್ಥಿ ದಿನ ಕೂಷ್ಮಾಂಡ ಸ್ವರೂಪ ಮತ್ತು ಪಂಚಮಿ ದಿನದ ಸ್ಕಂದ ಮಾತಾ ಸ್ವರೂಪದ ಪೂಜೆಯನ್ನು ಒಟ್ಟಿಗೆ ಮಾಡಲಾಗುತ್ತದೆ.

ಈ ಎರಡು ದಿನಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಉಳಿದ ದಿನಗಳಲ್ಲಿ ಎಂದಿನಂತೆ ದೇವಿಯ ಆರಾಧನೆ ಇರಲಿದ್ದು, ಅಕ್ಟೋಬರ್ 15 ರಂದು ವಿಜಯದಶಮಿ ಮೆರವಣಿಗೆ ನಡೆಯಲಿದೆ. ಮೈಸೂರು ಅರಮನೆ ಪಂಚಾಂಗ, ಒಂಟಿಕೊಪ್ಪಲ್ ಪಂಚಾಂಗ ಮತ್ತು ಮೇಲುಕೋಟೆ ಪಂಚಾಂಗವನ್ನಾಧರಿಸಿ ಈ ಲೆಕ್ಕಾಚಾರ ಮಾಡಲಾಗಿದೆ. ಇದೇನು ಹೊಸದಲ್ಲ. ಚಂದ್ರ ಭೂಮಿಯನ್ನು ಸುತ್ತುವಾಗ ಉಂಟಾಗುವ ಸಮಯದ ವ್ಯತ್ಯಾಸದಿಂದ ತಿಥಿಗಳಲ್ಲೂ ವ್ಯತ್ಯಾಸವಾಗುತ್ತದೆ.

ಈ ಹಿಂದೆಯೂ ಕೆಲವೊಮ್ಮೆ ಅಷ್ಟರಾತ್ರಿ, ಮತ್ತೆ ಕೆಲವೊಮ್ಮೆ ದಶರಾತ್ರಿಗಳೂ ಬಂದಿವೆ. ಸಾಮಾನ್ಯವಾಗಿ 4 ಅಥವಾ 5 ವರ್ಷಕ್ಕೊಮ್ಮೆ ಈ ರೀತಿಯ ಬದಲಾವಣೆಗಳಾಗುತ್ತವೆ. ಇದರಿಂದ ಯಾವುದೇ ದೋಷ ಉಂಟಾಗುವುದಿಲ್ಲ ಎಂದು ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ತಿಳಿಸಿದ್ದಾರೆ.

ಇದನ್ನೂ ಓದಿ:Mysuru ದಸರಾ: ಅರಮನೆಗೆ ಆಗಮಿಸಿದ 8 ಆನೆಗಳ ತೂಕವೆಷ್ಟು?; ಹೀಗಿತ್ತು ಇಂದಿನ ಗಜಪಯಣ

ABOUT THE AUTHOR

...view details