ಕರ್ನಾಟಕ

karnataka

ETV Bharat / city

ಲಾಕ್​ಡೌನ್ ಎಫೆಕ್ಟ್​: ಮೈಸೂರು ಪ್ರವಾಸೋದ್ಯಮಕ್ಕೆ ಅಂದಾಜು 400 ಕೋಟಿ ರೂ. ನಷ್ಟ

ಮೈಸೂರಿಗೆ ಪ್ರತಿ ವರ್ಷ 25 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಪ್ರತಿ ತಿಂಗಳು ಅಂದಾಜು 400 ಕೋಟಿ ರೂ. ವಹಿವಾಟು ನಡೆಯುತ್ತದೆ ಎಂದು ಅಂದಾಜಿಸಲಾಗಿದ್ದು, ಲಾಕ್​ಡೌನ್ ಹಿನ್ನೆಲೆ ಪ್ರವಾಸೋದ್ಯಮಕ್ಕೆ ತೀವ್ರ ಪೆಟ್ಟು ಬಿದ್ದಿದೆ.

By

Published : Apr 27, 2020, 3:22 PM IST

ಲಾಕ್​ಡೌನ್​ನಿಂದ ಮೈಸೂರು ಪ್ರವಾಸೋದ್ಯಮಕ್ಕೆ ನಷ್ಟ
ಲಾಕ್​ಡೌನ್​ನಿಂದ ಮೈಸೂರು ಪ್ರವಾಸೋದ್ಯಮಕ್ಕೆ ನಷ್ಟ

ಮೈಸೂರು: ಪ್ರವಾಸಿ ತಾಣ ಎಂದು ಪ್ರಸಿದ್ಧಿ ಪಡೆದಿರುವ ಸಾಂಸ್ಕೃತಿಕ ನಗರಿ, ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿದ್ದು ಲಾಕ್ ಡೌನ್ ಹಿನ್ನೆಲೆ ತಿಂಗಳಿಗೆ 400 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಲಾಕ್​ಡೌನ್​ನಿಂದ ಮೈಸೂರು ಪ್ರವಾಸೋದ್ಯಮಕ್ಕೆ ನಷ್ಟ

ಮೈಸೂರಿಗೆ ಪ್ರತಿ ವರ್ಷ 25 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಪ್ರತಿ ತಿಂಗಳು ಅಂದಾಜು 400 ಕೋಟಿ ರೂ. ವಹಿವಾಟು ನಡೆಯುತ್ತದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಈ ಭಾಗದಲ್ಲಿ ಉಂಟಾದ ನೆರೆ, ಕೊಡಗಿನಲ್ಲಿ ಉಂಟಾದ ಪ್ರವಾಹ, ಭೂ ಕುಸಿತದಿಂದ ಈ ಪ್ರದೇಶಕ್ಕೆ ಬರುವ ಪ್ರವಾಸಿಗರ ಪ್ರಮಾಣ ಸ್ವಲ್ಪ ಕಡಿಮೆ ಆಗಿದ್ದು, ಈ ವರ್ಷ ಪರೀಕ್ಷೆಗಳು ಮುಗಿದು ಜನರು ಪ್ರವಾಸಕ್ಕೆ ಬರುವ ಸಮಯಕ್ಕೆ ಲಾಕ್​ಡೌನ್ ಘೋಷಿಸಲಾಗಿದೆ. ಹಾಗಾಗಿ ಪ್ರವಾಸೋದ್ಯಮಕ್ಕೆ ತೀವ್ರ ಪೆಟ್ಟು ಬಿದ್ದಿದೆ.

ಯಾರಿಗೆ ನಷ್ಟ ?

ಸಾಂಸ್ಕೃತಿಕ ನಗರಿ ಪ್ರವಾಸಿ ನಗರಿ ಆಗಿರುವುದರಿಂದ ಇಲ್ಲಿನ ಜನ ಪ್ರವಾಸೋದ್ಯಮವನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಸುಮಾರು ಇಲ್ಲಿ 2,000 ಟ್ಯಾಕ್ಸಿಗಳಿವೆ. ಈ ಆದಾಯವನ್ನೇ ನಂಬಿಕೊಂಡು ಇವರ ಕುಟುಂಬಗಳು ಜೀವನ ನಿರ್ವಾಹಣೆ ಮಾಡುತ್ತವೆ. ಆದರೆ ಈಗ ಸಂಕಷ್ಟ ಎದುರಾಗಿದ್ದು ಟ್ಯಾಕ್ಸಿಗಳಿಂದ ಪ್ರತಿ ತಿಂಗಳಿಗೆ 100 ಕೋಟಿ ನಷ್ಟ ಆಗಿದೆ ಎನ್ನಲಾಗಿದೆ.

ಇನ್ನು ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಇದರ ಜೊತೆ ಟಾಂಗಾ ಗಾಡಿಗಳನ್ನು ನಂಬಿ ಬದುಕುವವರು ಸಹ ಸಂಕಷ್ಟ ಸಿಲುಕಿದ್ದಾರೆ. ಆ ಮೂಲಕ ಈ ಬೀದಿ ಬದಿ, ಟಾಂಗಾ, ವ್ಯಾಪಾರ ಮಳಿಗೆಗಳು ಸೇರಿದಂತೆ ಇತರೆ ಮೂಲಗಳಿಂದ ತಿಂಗಳಿಗೆ 100 ಕೋಟಿ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.

ಸಂಕಷ್ಟಕ್ಕೆ ಸಿಲುಕಿದ ಹೋಟೆಲ್ ಉದ್ಯಮ:

ಮೈಸೂರಿನಲ್ಲಿ 15,000 ಕ್ಕೂ ಹೆಚ್ಚು ಹೋಟೆಲ್​ಗಳು, ಲಾಡ್ಜ್, ರೆಸ್ಟೋರೆಂಟ್​ಗಳಿವೆ. ಸುಮಾರು 30,000 ಮಂದಿ ನೇರವಾಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನೇ ಅವಲಂಬಿಸಿ ಲಕ್ಷಾಂತರ ಮಂದಿ ಇದ್ದು, ಲಾಕ್​ಡೌನ್ ನಿಂದ ಕಳೆದ ಒಂದು ತಿಂಗಳಿಂದ ಯಾವುದೇ ವಹಿವಾಟು ಇಲ್ಲದೆ ಸುಮಾರು ತಿಂಗಳಿಗೆ 200 ಕೋಟಿ ನಷ್ಟ ಸಂಭವಿಸಿದೆ. ಹೋಟೆಲ್ ಉದ್ಯಮ ಸಂಕಷ್ಟದಲ್ಲಿದ್ದು ಚೇತರಿಸಿಕೊಳ್ಳಲು ತಿಂಗಳುಗಳೇ ಬೇಕಾಗಬಹುದು. ಜೊತೆಗೆ ಸಾಲ ಮಾಡಿ ಹೋಟೆಲ್, ಲಾಡ್ಜ್ ಕಟ್ಟಿರುವವರ ಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details