ಕರ್ನಾಟಕ

karnataka

ತಸ್ತೀಕ್ ಹಣ ಹಿಂದೂ ದೇವಸ್ಥಾನಗಳಿಗೆ ಮಾತ್ರ ವಿನಿಯೋಗ: ಕೋಟ ಸ್ಪಷ್ಟನೆ

764 ಇತರ ಧರ್ಮೀಯ ಪ್ರಾರ್ಥನಾ ಮಂದಿರ, ಬಸದಿಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದಲೇ ಹಣ ಹೋಗುತ್ತಿದೆ. ಅಲ್ಲದೆ 111 ಅನ್ಯ ಧರ್ಮೀಯ ಧಾರ್ಮಿಕ ಕ್ಷೇತ್ರಗಳಿಗೆ ವರ್ಷಾಸನ ಹೋಗುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.

By

Published : Jun 10, 2021, 4:06 PM IST

Published : Jun 10, 2021, 4:06 PM IST

Updated : Jun 10, 2021, 5:28 PM IST

ETV Bharat / city

ತಸ್ತೀಕ್ ಹಣ ಹಿಂದೂ ದೇವಸ್ಥಾನಗಳಿಗೆ ಮಾತ್ರ ವಿನಿಯೋಗ: ಕೋಟ ಸ್ಪಷ್ಟನೆ

 Tasteek money is exclusively for only Hindu temples: kota sreenivas
Tasteek money is exclusively for only Hindu temples: kota sreenivas

ಮಂಗಳೂರು: ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ತಸ್ತೀಕ್ ಹಣವನ್ನು ಇನ್ನು ಮುಂದೆ ಹಿಂದೂ ದೇವಸ್ಥಾನಗಳಿಗೆ ಮಾತ್ರ ವಿನಿಯೋಗ ಮಾಡುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಕರ್ನಾಟಕದಲ್ಲಿನ 34,500 ಸಾವಿರ ಹಿಂದೂ ದೇವಸ್ಥಾನಗಳಲ್ಲಿ 27 ಸಾವಿರ ದೇವಸ್ಥಾನಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ವಾರ್ಷಿಕ 48 ಸಾವಿರ ರೂ. ನಂತೆ ಸುಮಾರು 133 ಕೋಟಿ ರೂ. ಹಣವನ್ನು ತಸ್ತೀಕ್ ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅದರ ಜೊತೆಗೆ ಭೂಸುಧಾರಣಾ ಕಾನೂನು ಸಂದರ್ಭದಲ್ಲಿ ಭೂಮಿಯನ್ನು ಕಳೆದುಕೊಂಡ ದೇವಸ್ಥಾನಗಳಿಗೆ ವರ್ಷಾಸನ ಎಂದು ಇತರ ಅನುದಾನಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ತಸ್ತೀಕ್ ಹಣ ಹಿಂದೂ ದೇವಸ್ಥಾನಗಳಿಗೆ ಮಾತ್ರ ವಿನಿಯೋಗ: ಕೋಟ ಸ್ಪಷ್ಟನೆ

ಇದೀಗ ಈ ತಸ್ತೀಕ್ ಹಣ ಹಿಂದೂ ದೇವಾಲಯಗಳಲ್ಲದ ಇತರ ಧರ್ಮೀಯ ಧಾರ್ಮಿಕ ಕೇಂದ್ರಗಳಿಗೆ ಹೋಗುತ್ತಿರುವುದರ ಬಗ್ಗೆ ವ್ಯಾಪಕ ಚರ್ಚೆಗಳು ಕೇಳಿ ಬರುತ್ತಿವೆ. ಈ ಬಗ್ಗೆ ಅದರ ವರದಿಯನ್ನು ತಂದು ಪರಿಶೀಲನೆ ನಡೆಸಿದಾಗ 764 ಇತರ ಧರ್ಮೀಯ ಪ್ರಾರ್ಥನಾ ಮಂದಿರ, ಬಸದಿಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದಲೇ ಹಣ ಹೋಗುತ್ತಿದೆ. ಅಲ್ಲದೆ 111 ಅನ್ಯ ಧರ್ಮೀಯ ಧಾರ್ಮಿಕ ಕ್ಷೇತ್ರಗಳಿಗೆ ವರ್ಷಾಸನ ಹೋಗುತ್ತಿದೆ. ಆದ್ದರಿಂದ ಇನ್ನು ಮುಂದೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅನುದಾನ ಬರೀ ಹಿಂದೂ ದೇವಾಲಯಗಳಿಗೆ ಮಾತ್ರ ವಿನಿಯೋಗ ಆಗಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ನಮ್ಮ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಈ ಬಗ್ಗೆ ರಾಜ್ಯ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ಅನುಮತಿ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಈ ಮೂಲಕ ಆದಷ್ಟು ಶೀಘ್ರದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅನುದಾನವನ್ನು ಇನ್ನು ಮುಂದೆ ಹಿಂದೂ ದೇವಸ್ಥಾಗಳಿಗೆ ಮಾತ್ರ ಸೀಮಿತಗೊಳಿಸಿ ಆದೇಶಿಸಲಾಗುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Last Updated : Jun 10, 2021, 5:28 PM IST

ABOUT THE AUTHOR

...view details