ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆಯಾಗಿ ನಾಪತ್ತೆಯಾದವರಲ್ಲಿ ಇನ್ನೂ ನಾಲ್ವರ ಸುಳಿವು ಸಿಗದ ಹಿನ್ನೆಲೆ ಇಂದು ಮತ್ತೆ ಶೋಧ ಕಾರ್ಯ ಆರಂಭವಾಗಿದೆ.
ಮಂಗಳೂರಿನ ಧಕ್ಕೆ ಅಳಿವೆ ಬಾಗಿಲಿನಲ್ಲಿ 'ಶ್ರೀರಕ್ಷಾ' ಎಂಬ ಬೋಟ್ ಸೋಮವಾರ ರಾತ್ರಿ ಮೀನು ಹಿಡಿದುಕೊಂಡು ಧಕ್ಕೆಗೆ ವಾಪಸ್ ಬರುತ್ತಿರುವಾಗ ದುರಂತ ಸಂಭವಿಸಿ 6 ಮೀನುಗಾರರು ನಾಪತ್ತೆಯಾಗಿದ್ದರು. ಈ ಬೋಟ್ನಲ್ಲಿದ್ದ 22 ಮೀನುಗಾರರಲ್ಲಿ 16 ಮಂದಿಯನ್ನು ರಕ್ಷಣೆ ಮಾಡಲಾಗಿತ್ತು.
ಕೋಸ್ಟ್ ಗಾರ್ಡ್, ಇತರೆ ಹಡಗಿನ ಮೀನುಗಾರರು ಮತ್ತು ಮುಳುಗು ತಜ್ಞರು ಶೋಧ ಕಾರ್ಯ ನಡೆಸಿ ನಿನ್ನೆ ಇಬ್ಬರ ಮೃತದೇಹ ಹೊರತೆಗೆದಿದ್ದರು. ಪಾಂಡುರಂಗ ಸುವರ್ಣ ಮತ್ತು ಪ್ರೀತಂ ಎಂಬುವರ ಮೃತದೇಹ ನಿನ್ನೆ ಪತ್ತೆಯಾಗಿದ್ದು, ಚಿಂತನ್, ಝಿಯಾವುಲ್ಲಾ, ಅನ್ಸಾರ್, ಹಸೈನಾರ್ ಎಂಬ ನಾಲ್ವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ.