ಉಳ್ಳಾಲ:ನಾಲ್ಕು ಮಂದಿಯ ತಂಡವೊಂದು ಯುವಕನೋರ್ವನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಸಮೀಪದ ಮಸೀದಿ ಬಳಿ ನಡೆದಿದೆ. ಕೋಡಿ ನಿವಾಸಿ ಮೊಯ್ದೀನ್ ಎಂಬವರ ಪುತ್ರ ಅಲ್ ಸದೀನ್ ( 24) ಎಂಬಾನಿಗೆ ಚೂರಿಯಿಂದ ಇರಿಯಲಾಗಿದೆ.
ಮಸೀದಿ ಸಮೀಪ ನಿಂತಿದ್ದ ವೇಳೆ ತಂಡ ಚೂರಿಯಿಂದ ಬೆನ್ನಿನ ಭಾಗಕ್ಕೆ ಇರಿದು ಕೊಲೆಗೆ ಯತ್ನಿಸಿದೆ. ಮಾಹಿತಿಗಳ ಪ್ರಕಾರ ಈ ನಾಲ್ಕು ಮಂದಿ ಸ್ನೇಹಿತರಾಗಿದ್ದು, ಒಟ್ಟಿಗೆ ಮಾತನಾಡುತ್ತಿದ್ದ ಸಂದರ್ಭ ಯುವತಿಯ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದು ಚೂರಿಯಿಂದ ಇರಿದಿದ್ದಾರೆ ಎನ್ನಲಾಗ್ತಿದೆ.