ಉಳ್ಳಾಲ(ಮಂಗಳೂರು):ಇಂದು ಕಾನೂನಿನ ಚೌಕಟ್ಟಿನೊಳಗೆ ಶ್ರೀ ರಾಮ ಜನ್ಮ ಭೂಮಿಯಲ್ಲಿ ಭೂಮಿ ಪೂಜೆ ನೆರವೇರುವ ಸುಸಂದರ್ಭ ಒದಗಿ ಬಂದಿದೆ ಎಂದು ಕೊಲ್ಯ ಮೂಕಾಂಬಿಕಾ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಧುಸೂದನ್ ಅಯ್ಯರ್ ಹೇಳಿದರು.
ಹಿಂದೂಗಳ ರಕ್ತಕ್ರಾಂತಿಗೆ ಇಂದು ನ್ಯಾಯ ದೊರಕಿದೆ : ಮಧುಸೂದನ್ ಅಯ್ಯರ್ - ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನ
ಮೂರು ಲಕ್ಷ ಹಿಂದೂಗಳು ರಕ್ತಕ್ರಾಂತಿ ಮಾಡಿದ್ದರೂ, ಅಂದು ದೇವಸ್ಥಾನ ಕಟ್ಟುವ ಪ್ರಯತ್ನ ವಿಫಲವಾಗಿತ್ತು. ಆದರೆ ಇಂದು ಅವರ ತ್ಯಾಗದ ಪ್ರತಿಫಲವಾಗಿ ಯಾವುದೇ ಕ್ರಾಂತಿಯಿಲ್ಲದೆ, ಕಾನೂನಿನ ಚೌಕಟ್ಟಿನೊಳಗೆ ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರುವ ಸುಸಂದರ್ಭ ಒದಗಿದೆ. ಹಿಂದೂಗಳ ರಕ್ತಕ್ರಾಂತಿಗೆ ಇಂದು ನ್ಯಾಯ ದೊರಕಿದೆ ಎಂದು ಮಧುಸೂದನ್ ಅಯ್ಯರ್ ಹೇಳಿದರು.
ವಿಶ್ವಹಿಂದು ಪರಿಷತ್ ಬಜರಂಗದಳ ಉಳ್ಳಾಲ ನಗರ ಪ್ರಖಂಡ ವತಿಯಿಂದ, ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿನ ಭೂಮಿ ಪೂಜೆಯ ಸಲುವಾಗಿ ಜರುಗಿದ ಸತ್ಸಂಗ ಹಾಗೂ ಕರಸೇವಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮೂರು ಲಕ್ಷ ಹಿಂದೂಗಳು ರಕ್ತಕ್ರಾಂತಿ ಮಾಡಿದ್ದರೂ, ಅಂದು ದೇವಸ್ಥಾನ ಕಟ್ಟುವ ಪ್ರಯತ್ನ ವಿಫಲವಾಗಿತ್ತು. ಆದರೆ ಇಂದು ಅವರ ತ್ಯಾಗದ ಪ್ರತಿಫಲವಾಗಿ ಯಾವುದೇ ಕ್ರಾಂತಿಯಿಲ್ಲದೆ, ಕಾನೂನಿನ ಚೌಕಟ್ಟಿನೊಳಗೆ ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರುವ ಸುಸಂದರ್ಭ ಒದಗಿದೆ. ಹಿಂದೂಗಳ ರಕ್ತಕ್ರಾಂತಿಗೆ ಇಂದು ನ್ಯಾಯ ದೊರಕಿದೆ ಎಂದು ಅವರು ಹೇಳಿದರು.