ಕರ್ನಾಟಕ

karnataka

ETV Bharat / city

ಮಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡ.. ಅ.2 ರವರೆಗೆ‌ ನಡೆಯಲಿದೆ ಕಾರ್ಯಾಚರಣೆ - ವಾಹನಗಳಿಗೆ ದಂಡ

ನಗರದಲ್ಲಿ ನಿನ್ನೆಯಿಂದ ಆರು ದಿನಗಳ ಕಾಲ ವಾಹನ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ‌. ಇಂದು ನಂಬರ್ ಪ್ಲೇಟ್​ನಲ್ಲಿನ ದೋಷದ ಕುರಿತಂತೆ ಕಾರ್ಯಾಚರಣೆ ನಡೆಯುತ್ತಿದ್ದು, ನಿಯಮ ಉಲ್ಲಂಘನೆ ಮಾಡಿರುವ ವಾಹನಗಳಿಗೆ 500 ರೂ. ದಂಡ ವಿಧಿಸಲಾಗಿದೆ.

fine for vehicles which violate traffic rules at Mangalore
ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡ

By

Published : Sep 28, 2021, 1:14 PM IST

ಮಂಗಳೂರು: ಸಂಚಾರಿ ನಿಯಮ‌ ಉಲ್ಲಂಘನೆ ಕುರಿತಂತೆ ಇಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಮತ್ತು ಪೊಲೀಸ್ ತಂಡ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ‌ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ನಂಬರ್ ಪ್ಲೇಟ್ ನಿಯಮ ಉಲ್ಲಂಘನೆ ಮಾಡಿರುವ ವಾಹನಗಳಿಗೆ ದಂಡ ವಿಧಿಸಲಾಯಿತು.

ರಿಜಿಸ್ಟ್ರೇಷನ್ ಮಾಡದ, ನಂಬರ್ ಪ್ಲೇಟ್ ಗಳಿಲ್ಲದ ವಾಹನಗಳು ಸೇರಿದಂತೆ ನಿಯಮ ಉಲ್ಲಂಘನೆ ಮಾಡಿರುವ ಸಾಕಷ್ಟು ವಾಹನಗಳ ಮೇಲೆ ದಂಡ ವಿಧಿಸಿದ್ದಾರೆ. ನಂಬರ್ ಪ್ಲೇಟ್ ನಿಯಮ ಉಲ್ಲಂಘನೆ ಮಾಡಿರುವ ವಾಹನಗಳಿಗೆ 500 ರೂ. ದಂಡ ವಿಧಿಸಲಾಗಿದೆ.

ಇದನ್ನೂ ಓದಿ:ಇಂದಿನಿಂದ ಅ.2ರವರೆಗೆ ಮಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಾಚರಣೆ

ನಿನ್ನೆಯಿಂದ ಈ ಕಾರ್ಯಾಚರಣೆ ಆರಂಭವಾಗಿದ್ದು, ಅಕ್ಟೋಬರ್ 2 ರವರೆಗೆ‌ ನಡೆಯಲಿದೆ. ಒಂದೊಂದು ದಿನವೂ ವಿವಿಧ ಸಾರಿಗೆ ನಿಯಮ ಉಲ್ಲಂಘನೆಯ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಿದ್ದಾರೆ. ಇಂದು ನಂಬರ್ ಪ್ಲೇಟ್​ನಲ್ಲಿನ ದೋಷದ ಕುರಿತಂತೆ ಕಾರ್ಯಾಚರಣೆ ನಡೆಯುತ್ತಿದೆ.

ABOUT THE AUTHOR

...view details