ಮಂಗಳೂರು: ಬಿಜೆಪಿಗರಿಗೆ ತಮ್ಮ ಸಾಧನೆ ಶೂನ್ಯವೆಂದು ತಿಳಿದಿದೆ. ಆದ್ದರಿಂದ ಗ್ರಾ.ಪಂ ಚುನಾವಣೆ ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಗೂಂಡಾಗಳ ಮೂಲಕ ಅಲ್ಪಸಂಖ್ಯಾತ ನಾಯಕನ ಮೇಲೆ ದಾಳಿ ನಡೆಸಿದೆ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಆರೋಪಿಸಿದರು.
ಬಿಜೆಪಿಗರಿಗೆ ತಮ್ಮ ಸಾಧನೆ ಶೂನ್ಯ ಎಂಬುದು ತಿಳಿದಿದೆ: ಮೊಯ್ದೀನ್ ಬಾವಾ - Former MLA Moideen Bawa
ಬಿಜೆಪಿಗರಿಗೆ ಗ್ರಾ.ಪಂ ಚುನಾವಣೆ ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಗೂಂಡಾಗಳ ಮೂಲಕ ಅಲ್ಪಸಂಖ್ಯಾತ ನಾಯಕನ ಮೇಲೆ ದಾಳಿ ನಡೆಸಿದೆ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೂರು ದಿವಸಗಳ ಹಿಂದೆ ನಗರದ ಕುಲಶೇಖರದಲ್ಲಿ ಕಾಂಗ್ರೆಸ್ ಮುಖಂಡ, ಉಳಾಯಿಬೆಟ್ಟು ಪಂಚಾಯತ್ನ ಮಾಜಿ ಅಧ್ಯಕ್ಷ ಯೂಸುಫ್ ಅವರ ಮೇಲೆ ಹಲ್ಲೆ ನಡೆಸಲು ಯತ್ನ ನಡೆಯುತ್ತದೆ. ಕಾರಿನ ಮೇಲೆ ತಲವಾರ್ನಿಂದ ದಾಳಿ ನಡೆಸಿ ಗಾಜನ್ನು ಪುಡಿಗೈಯ್ಯಲಾಗಿದೆ. ಆದರೆ, ಹೇಗೋ ಯೂಸುಫ್ ಅವರು ಅಲ್ಲಿಂದ ತಪ್ಪಿಸಿಕೊಂಡು ಓಡುತ್ತಾರೆ. ಇದು ಅಲ್ಪಸಂಖ್ಯಾತ ನಾಯಕನ ಮೇಲೆ ಹಲ್ಲೆ ನಡೆಸಿ, ಕೋಮು ಭಾವನೆ ಕೆರಳಿಸಿ ಬಿಜೆಪಿಗರು ಗ್ರಾಮ ಪಂಚಾಯತ್ ಚುನಾವಣೆ ಗೆಲ್ಲಬೇಕು ಎಂದು ನಡೆಸಿದ ಕೃತ್ಯವಾಗಿದೆ ಎಂದು ಹೇಳಿದರು.
ಬೇರೆ ಸಮುದಾಯದ ಮುಖಂಡರಿಗೆ ಈ ತರಹದ ದಾಳಿ ನಡೆಸುತ್ತಿದ್ದಲ್ಲಿ ಬಹುದೊಡ್ಡ ಸುದ್ದಿಯಾಗುತ್ತಿತ್ತು. ನಮ್ಮ ನಾಯಕನನ್ನು ಬೆದರಿಸುವ ನಿಟ್ಟಿನಲ್ಲಿ ಬಿಜೆಪಿಯ ಗೂಂಡಾಗಳು ಈ ದಾಳಿ ನಡೆಸಿದ್ದಾರೆ. ದಾಳಿಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ತಕ್ಷಣ ಅವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಲ್ಲಿ ಮನವಿ ಮಾಡುತ್ತೇನೆ ಎಂದು ಮೊಯ್ದೀನ್ ಬಾವಾ ಹೇಳಿದರು.