ಕರ್ನಾಟಕ

karnataka

ETV Bharat / city

ಕೊರೊನಾ ಶಂಕೆ: ಮಂಗಳೂರಿನಲ್ಲಿ ಇಂದು 10 ಮಂದಿಯ ಗಂಟಲು ದ್ರವ ಪ್ರಯೋಗಾಲಯಕ್ಕೆ ರವಾನೆ

ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ಹರಸಾಹಸ ನಡೆಸುತ್ತಿದ್ದು ವಿದೇಶದಿಂದ ದ.ಕ ಜಿಲ್ಲೆಗೆ ಬಂದ 838 ಮಂದಿಯನ್ನು ತಪಾಸಣೆಗೊಳಪಡಿಸಿ ಅದರಲ್ಲಿ 10 ಮಂದಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.

10-people-throat-liquid-sent-for-test-in-mangalore
ಕೊರೊನಾ ವೈರಸ್​

By

Published : Mar 16, 2020, 9:45 PM IST

ಮಂಗಳೂರು:ದೇಶದಲ್ಲಿ ಕೊರೊನಾ ಮಾರಕವಾಗಿ ಪರಿಣಮಿಸಿದ್ದು, ವಿದೇಶದಿಂದ ಜಿಲ್ಲೆಗೆ ಬಂದ 838 ಮಂದಿಯ ತಪಾಸಣೆ ಮಾಡಿ ಹತ್ತು ಮಂದಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.

ದ.ಕ. ಜಿಲ್ಲಾಡಳಿತ ಕೊರೊನಾ ವೈರಸ್​ ಭೀತಿ ಹಿನ್ನೆಲೆ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಿದ್ದು, ಇಂದು ವಿದೇಶದಿಂದ ಬಂದ 838 ಜನರನ್ನು ತಪಾಸಣೆ ಮಾಡಿದ ಅದರಲ್ಲಿ 10 ಮಂದಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.

ದ.ಕ ಜಿಲ್ಲಾಡಳಿತ ಕೊರೊನಾ ವೈರಸ್​ ವರದಿ

ಈ ಹಿಂದೆ ಕಳುಹಿಸಲಾಗಿದ್ದ ಹನ್ನೊಂದು ಮಂದಿಯ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿದ್ದು, ಯಾರಿಗೂ ಕೊರೊನಾ ಸೋಂಕು ಇಲ್ಲ ಎಂದು ದೃಢಪಟ್ಟಿದೆ. ಸದ್ಯ ಐದು ಮಂದಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು. ವಿದೇಶದಿಂದ ಬಂದಿರುವ 115 ಮಂದಿ ಮನೆಯಲ್ಲಿ ವೈದ್ಯಕೀಯ ನಿಗಾದಲ್ಲಿದ್ದಾರೆ. ಇಂದಿಗೆ 7 ಮಂದಿಯ ವೈದ್ಯಕೀಯ ನಿಗಾ ಅವಧಿ ಪೂರ್ಣಗೊಂಡಿದ್ದು, ಅವರಲ್ಲಿ ಸೋಂಕು ಪತ್ತೆಯಾಗಿಲ್ಲ.

ABOUT THE AUTHOR

...view details