ಕಲಬುರಗಿ: ನಮ್ಮಲ್ಲಿ ಒಡಕಿನ ಪ್ರಶ್ನೆಯೇ ಇಲ್ಲ. ಪಕ್ಷದಲ್ಲಿ ಕೆಲವು ಸಣ್ಣಪುಟ್ಟ ಅಪೇಕ್ಷೆಗಳಿರುವುದು ಸಾಮಾನ್ಯ. ಅದಕ್ಕೆಲ್ಲ ಸ್ಪಂದಿಸುವ ಕೆಲಸ ಆಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.
'ನಮ್ಮಲ್ಲಿ ಒಡಕಿನ ಪ್ರಶ್ನೆಯೇ ಇಲ್ಲ, ಸಣ್ಣಪುಟ್ಟ ಅಪೇಕ್ಷೆಗಳಿಗೆ ಸ್ಪಂದಿಸಲಾಗುತ್ತಿದೆ'
ಬಿಜೆಪಿಯಲ್ಲಿ ಒಡಕಿನ ಪ್ರಶ್ನೆಯೇ ಇಲ್ಲ. ಕೆಲವು ಸಣ್ಣಪುಟ್ಟ ಅಪೇಕ್ಷೆಗಳಿರುವುದು ಸಾಮಾನ್ಯ. ಅದಕ್ಕೆಲ್ಲ ಸ್ಪಂದಿಸುವ ಕೆಲಸ ಆಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ಕಲಬುರಗಿಯಲ್ಲಿ ಹೇಳಿದ್ದಾರೆ.
ಸಚಿವ ಆನಂದ್ ಸಿಂಗ್ ರಾಜೀನಾಮೆ ವಿಚಾರದ ಕುರಿತು ನಗರದಲ್ಲಿ ಮಾತನಾಡಿದ ಸಚಿವರು, ಆನಂದ್ ಸಿಂಗ್ ಈಗಾಗಲೇ ಸಿಎಂ ಜೊತೆ ಮಾತನಾಡಿದ್ದಾರೆ. ಅವರನ್ನೂ ಸಹ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅವರು ಇದುವರೆಗೆ ಎಲ್ಲೂ ಬಹಿರಂಗವಾಗಿ ಸರ್ಕಾರದ ಬಗ್ಗೆ ಮಾತನಾಡಿಲ್ಲ. ಅವರು ರಾಜೀನಾಮೆ ಕೊಡುವ ವಿಚಾರವೇ ಇಲ್ಲ ಎಂದರು.
ಅಕ್ಟೋಬರ್‌ನಲ್ಲಿ ಕೋವಿಡ್ ಹೆಚ್ಚಾಗುವ ಆತಂಕ ಇದೆ. ಹಾಗಂತ ಆಗೇ ಆಗುತ್ತೆ ಅಂತ ಅಲ್ಲ, ಆಗಬಹುದು ಎಂದು ಊಹಿಸಲಾಗಿದೆ ಅಷ್ಟೇ. ಈಗಾಗಲೇ ಶೇ.60 ರಷ್ಟು ಜನರಿಗೆ ಸಿಂಗಲ್ ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ಅಲ್ಲದೇ ವಿದ್ಯಾರ್ಥಿಗಳು, ಶಿಕ್ಷಕರಿಗೆ ಲಸಿಕೆ ಕೊಡಲಾಗಿದೆ. ಸದ್ಯ ನಾವು ಉತ್ತಮ ಪರಿಸ್ಥಿತಿಯಲ್ಲಿದ್ದೇವೆ. ಎರಡನೇ ಅಲೆಯಲ್ಲಿ ಬಂದಂತಹ ಪರಿಸ್ಥಿತಿ ಈಗ ಬರುವುದಿಲ್ಲ ಎನ್ನುವ ವಿಶ್ವಾಸವಿದೆ. ಏನೇ ಸಮಸ್ಯೆ, ಸವಾಲುಗಳು ಇದ್ರೂ ಸಮರ್ಥವಾಗಿ ಎದುರಿಸಲು ಸಿದ್ದ ಎಂದು ಸಚಿವರು ತಿಳಿಸಿದರು.