ಕರ್ನಾಟಕ

karnataka

ಎಸ್​​ಟಿಗೆ ಕೋಲಿ ಸಮುದಾಯ.. ಸರ್ಕಾರದ ಕಾರ್ಯ ಶ್ಲಾಘಿಸಿದ ಮಾಲೀಕಯ್ಯ ಗುತ್ತೇದಾರ್​..

ಸಮಾಜ ಹಿಂದುಳಿದ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿತ್ತು. ಅಲ್ಲದೇ, ಜನರಿಗೆ ನಾವು ನೀಡಿದ ಭರವಸೆಯಂತೆ ಸರ್ಕಾರ ಕ್ರಮಕೈಗೊಂಡಿದೆ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮೇಲೆ ಇತರೆ ಸಮುದಾಯದಿಂದ ಒತ್ತಡವಿತ್ತು..

By

Published : Jan 31, 2022, 4:59 PM IST

Published : Jan 31, 2022, 4:59 PM IST

malikayya-guttedar
ಮಾಲೀಕಯ್ಯ ಗುತ್ತೇದಾರ್

ಕಲಬುರಗಿ :ಸಚಿವ ಸ್ಥಾನ ಕಳೆದುಕೊಳ್ಳುವ ಎಚ್ಚರಿಕೆ ಜೊತೆಗೆ ಸಾಕಷ್ಟು ಒತ್ತಡ ಹಾಕಿದರೂ ಮಣಿಯದೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್​ ಪೂಜಾರಿ ಅವರು ಕೋಲಿ ಸಮಾಜವನ್ನು ಎಸ್​ಟಿಗೆ ಸೇರ್ಪಡೆ ಮಾಡಿರುವುದು ಹರ್ಷದಾಯಕ ವಿಷಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್​ ಸಂತಸ ವ್ಯಕ್ತ‌ಪಡಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನು ಮತ್ತು‌ ಮಾಜಿ ಸಚಿವ ಬಾಬುರಾವ್​​ ಚಿಂಚನಸೂರ್​ ಕೋಲಿ ಸಮುದಾಯವನ್ನು ಎಸ್​ಟಿಗೆ ಸೇರಿಸುವ ಭರವಸೆ ನೀಡಿದ್ದೆವು. ಅದರಂತೆ ಈಗ ಕೋಲಿ ಸಮಾಜವನ್ನು ಎಸ್​ಟಿಗೆ ಸೇರಿಸಲಾಗಿದೆ ಎಂದರು.

ಸಮಾಜ ಹಿಂದುಳಿದ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿತ್ತು. ಅಲ್ಲದೇ, ಜನರಿಗೆ ನಾವು ನೀಡಿದ ಭರವಸೆಯಂತೆ ಸರ್ಕಾರ ಕ್ರಮಕೈಗೊಂಡಿದೆ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮೇಲೆ ಇತರೆ ಸಮುದಾಯದಿಂದ ಒತ್ತಡವಿತ್ತು.

ಕೋಲಿ ಸಮುದಾಯವನ್ನು ಎಸ್​​ಟಿ ಪಟ್ಟಿಗೆ ಸೇರಿಸಬಾರದು, ನಿರ್ಧಾರಕ್ಕೆ ಮುಂದಾದರೆ ಸಚಿವ ಸ್ಥಾನ ಕಳೆದುಕೊಳ್ಳಬೇಕಾದೀತು ಎಂಬ ಎಚ್ಚರಿಕೆ ಮಧ್ಯೆಯೇ ಸಚಿವರು ಕೋಲಿ ಸಮುದಾಯವನ್ನು ಎಸ್​ಟಿಗೆ ಸೇರಿಸಿದ್ದಾರೆ ಎಂದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details