ಕಲಬುರಗಿ :ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಿದರೆ ವಾಹನಗಳನ್ನ ಸೀಜ್ ಮಾಡಿ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ನಗರ ನೂತನ ಪೊಲೀಸ್ ಆಯುಕ್ತ ಎಂ ಸತೀಶ್‌ಕುಮಾರ್ ಖಡಕ್ ಎಚ್ಚರಿಕೆ ನೀಡಿದರು.
ಅನಗತ್ಯ ಓಡಾಡಿದ್ರೆ ಕ್ರಮ.. ನೂತನ ಕಲಬುರ್ಗಿ ಪೊಲೀಸ್ ಆಯುಕ್ತರ ಎಚ್ಚರಿಕೆ..
ಸಾರ್ವಜನಿಕರು ಕಿರಾಣಿ, ತರಕಾರಿ ತರಲು ಬೈಕ್ ತೆಗೆದುಕೊಂಡು ಹೋಗುವಂತಿಲ್ಲ. ಮನೆಯ ಅಕ್ಕಪಕ್ಕದ ಅಂಗಡಿಗಳಲ್ಲಿ ಖರೀದಿಸಬೇಕು ಎಂದು ನೂತನ ಆಯುಕ್ತುರು ಸೂಚಿಸಿದರು.
ನೂತನ ಪೊಲೀಸ್ ಆಯುಕ್ತ
ನಗರ ಪೊಲೀಸ್ ಆಯುಕ್ತರಾಗಿ ಇಂದು ಅಧಿಕಾರ ಸ್ವೀಕರಿಸಿ ನಂತರ ಮಾತನಾಡಿದ ಅವರು, ಲಾಕ್ಡೌನ್ ಆದೇಶವನ್ನ ಜನರು ಪಾಲಿಸಬೇಕು. ನೆಪವೊಡ್ಡಿ ರಸ್ತೆಯಲ್ಲಿ ಸಂಚರಿಸಬಾರದು. ಜಿಲ್ಲೆಯಲ್ಲಿ ಸೆಕ್ಷನ್144 ಜಾರಿಯಲ್ಲಿರುವ ಕಾರಣ ಗುಂಪು ಸೇರಬಾರದು. ನಿಯಮ ಉಲ್ಲಂಘಿಸಿದರೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.