ಕರ್ನಾಟಕ

karnataka

By

Published : Nov 7, 2021, 6:10 PM IST

ETV Bharat / city

'ಡಾ.ಸರಸ್ವತಿ ಚಿಮ್ಮಲಗಿಗೆ ಮತ ಹಾಕಿ ಕನ್ನಡಮ್ಮನ ಸೇವೆಗೆ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿ'

ಡಾ.ಸರಸ್ವತಿ ಚಿಮ್ಮಲಗಿ ಅವರು ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಈ ಬಾರಿ ಅವರು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದು, ಮತ ಹಾಕುವ ಮೂಲಕ ಕನ್ನಡಮ್ಮನ ಸೇವೆಗೆ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಮಾಜಿ ಸಚಿವೆ, ಲೇಖಕಿ ಬಿ.ಟಿ.ಲಲಿತಾ ನಾಯಕ್ ಮನವಿ ಮಾಡಿದರು.

bt-lalitha-asked-vote-for-saraswati-chimmalagi
ಬಿ ಟಿ ಲಲಿತಾ

ಕಲಬುರಗಿ:ಇಂದಿನ ಕಾಲದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುವ ಮೂಲಕ ಯಾರಿಗೂ ಕಡಿಮೆ ಇಲ್ಲ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಮಾಜಿ ಸಚಿವೆ, ಲೇಖಕಿ ಬಿ.ಟಿ.ಲಲಿತಾ ನಾಯಕ್ ಅಭಿಪ್ರಾಯಪಟ್ಟರು.


ನಗರದಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಕ್ಷೇತ್ರದಲ್ಲಿ ಮಹಿಳೆಯರು, ಪುರುಷರ ಸರಿಸಮನಾಗಿ ದುಡಿಯುವ ಮೂಲಕ ಸೈ ಎನಿಸಿಕೊಳ್ಳುತ್ತಿದ್ದಾರೆ. ಅದರಂತೆ ಸಾಹಿತ್ಯ ಕ್ಷೇತ್ರಕ್ಕೂ ಕೊಡ ಮಹಿಳೆಯರ ಕೊಡುಗೆ ಅಪಾರವಾಗಿದೆ. ಹೀಗಾಗಿ, ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಏಕೈಕ ಮಹಿಳೆ ಡಾ. ಸರಸ್ವತಿ ಚಿಮ್ಮಲಗಿ ಅವರನ್ನು ಆಯ್ಕೆ ಮಾಡಿ ಕನ್ನಡಮ್ಮನ ಸೇವೆಗೆ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ಬೇಕಾಗಿರುವುದು ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡದ ಬಗ್ಗೆ ಆಸಕ್ತಿ ಇರುವಂತಹ ಮೇರು ವ್ಯಕ್ತಿತ್ವ ಉಳ್ಳವರು. ಅಂತಹ ವ್ಯಕ್ತಿತ್ವ ಕಂಡುಬರುವುದು ಸರಸ್ವತಿ ಚಿಮ್ಮಲಗಿ ಅವರಲ್ಲಿ ಮಾತ್ರ. ಯಾಕಂದ್ರೆ ಅವರು ಸಾಹಿತಿಗಳು ಮಾತ್ರವಲ್ಲದೆ ರಂಗಭೂಮಿ ಕಲಾವಿದರೂ ಸಹ ಹೌದು. ಕನ್ನಡದ ಬಗ್ಗೆ ಅವರು ವಿಶೇಷ ಆಸಕ್ತಿ ಹೊಂದಿದ್ದಾರೆ. ಇಂತಹ ಕಲಾವಿದರು, ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್ತಿಗೆ ಆಯ್ಕೆಯಾದರೆ ಕನ್ನಡವನ್ನ ಮನ, ಮನೆಗೆ ತಲುಪಿಸಲು ಸಹಕಾರವಾಗುತ್ತದೆ‌ ಎಂದು ಹೇಳಿದರು.

ABOUT THE AUTHOR

...view details