ಕರ್ನಾಟಕ

karnataka

ETV Bharat / city

ತುತ್ತು ಅನ್ನಕ್ಕಾಗಿ ಪರದಾಟ: ಹುಬ್ಬಳ್ಳಿಯಲ್ಲಿ ಸಹಾಯಕ್ಕಾಗಿ ಬೇಡಿಕೊಂಡ ಮಂಗಳಮುಖಿಯರು!

ದೇಶಾದ್ಯಂತ ಕೊರೊನಾ ಎಫೆಕ್ಟ್ ನಿಂದ ಹಲವಾರು ಸಮಸ್ಯೆಗಳು ಎದುರಾಗಿದ್ದು, ಅದರಲ್ಲೂ ನಿರ್ಗತಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಸದ್ಯ ಮಂಗಳಮುಖಿಯರು ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ.

By

Published : Apr 18, 2020, 9:16 PM IST

Updated : Apr 18, 2020, 10:15 PM IST

third junder peoples begging food in hubballi
ತುತ್ತು ಅನ್ನಕ್ಕಾಗಿ ಪರದಾಟ, ಸಹಾಯಕ್ಕಾಗಿ ಬೇಡಿಕೊಂಡ ಹುಬ್ಬಳ್ಳಿ ಮಂಗಳಮುಖಿಯರು..!

ಹುಬ್ಬಳ್ಳಿ: ದೇಶಾದ್ಯಂತ ಕೊರೊನಾ ಎಫೆಕ್ಟ್​​ನಿಂದ ಹಲವಾರು ಸಮಸ್ಯೆಗಳು ಎದುರಾಗಿದ್ದು, ಅದರಲ್ಲೂ ನಿರ್ಗತಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಸದ್ಯ ಮಂಗಳಮುಖಿಯರೂ ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ.

ನಿತ್ಯವೂ ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯ ಹಲವಾರು ಮಂಗಳಮುಖಿಯರು ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಜನಜಂಗುಳಿ ಇರುವ ಸ್ಥಳಗಳಲ್ಲಿ ಭಿಕ್ಷಾಟನೆ ಮೂಲಕ ತಮ್ಮ ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರ ಸ್ಥಿತಿ ಸದ್ಯ ಶೋಚನೀಯವಾಗಿದೆ.

ನಿತ್ಯವೂ ಊಟಕ್ಕಾಗಿ ಅವರು ರಸ್ತೆಗೆ ಬರಬೇಕಾದ ಅನಿವಾರ್ಯತೆ ಹೆಚ್ಚಾಗಿದೆ. ಆದರೆ ಕೇಂದ್ರದ ಆದೇಶಕ್ಕೆ ಗೌರವ ನೀಡುತ್ತೇವೆ, ಹೊರಗಡೆ ಸುಮ್ಮನೆ ಓಡಾಡುವುದಿಲ್ಲ ಅಂತ ಮಂಗಳಮುಖಿಯರು ಹೇಳಿದ್ದಾರೆ.

ಲಾಕ್​ಡೌನ್ ಮುನ್ನ ನಿತ್ಯದ ಆಹಾರಕ್ಕೆ ಹಣ ಜೋಡಿಸುತ್ತಿದ್ದವರು ಇದೀಗ ಎಲ್ಲಿಯೂ ಹಣ ಸಿಗದೆ ಬದುಕು ಬೀದಿಗೆ ಬಿದ್ದಿದೆ. ಇನ್ನಾದರು ಜಿಲ್ಲಾಡಳಿತ ಮತ್ತು ಕೆಲ ಎನ್​ಜಿಒಗಳು ಮುಂದೆ ಬಂದು ನಮ್ಮ ಬಗ್ಗೆ ಕಾಳಜಿ ವಹಿಸಬೇಕು ಎಂದು ಮಂಗಳಮುಖಿಯರು ಬೇಡಿಕೊಳ್ಳುತ್ತಿದ್ದಾರೆ.

Last Updated : Apr 18, 2020, 10:15 PM IST

ABOUT THE AUTHOR

...view details