ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ - ಧಾರವಾಡ: ಮನೆಯಲ್ಲಿದ್ದ ಚಿನ್ನಾಭರಣ, ಹಣ ದೋಚಿ ಪರಾರಿಯಾದ ಕಳ್ಳರು - hubballi darawada latest news

ಹುಬ್ಬಳ್ಳಿ ಧಾರವಾಡದಲ್ಲಿ ಮನೆಯಲ್ಲಿ ಯಾರೂ ಇರದ ಸಮಯವನ್ನು ನೋಡಿಕೊಂಡು ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

hubballi darawada theft case
ಹುಬ್ಬಳ್ಳಿ ಧಾರವಾಡ ಕಳ್ಳತನ ಪ್ರಕರಣ

By

Published : Sep 14, 2021, 2:14 PM IST

ಕುಂದಗೋಳ: ಮನೆಯಲ್ಲಿ ಯಾರೂ ಇರದ ಸಮಯ ನೋಡಿಕೊಂಡ ಕಳ್ಳರು ಚಿನ್ನಾಭರಣ, ಹಣ ದೋಚಿ ಪರಾರಿಯಾಗಿರುವ ಘಟನೆ ಕುಂದಗೋಳ ಪಟ್ಟಣದ ರೇವಣಸಿದ್ಧೇಶ್ವರ ಪಾರ್ಕ್‌ನಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಪಟ್ಟಣದ ಮಾಣಿಕ್ಯ ಚಿಲ್ಲೂರ ಎಂಬುವವರ ಮನೆಗೆ ನುಗ್ಗಿದ ಕಳ್ಳರು 150 ಗ್ರಾಂ ತೂಕದ ಬೆಳ್ಳಿ ಚೈನ್​​, 60 ಗ್ರಾಂ ತೂಕದ ಚಿನ್ನದ ಒಡವೆ, ರಿಯಲ್ ಮಿ ಆಂಡ್ರಾಯ್ಡ್ ಸ್ಮಾರ್ಟ್​​ಫೋನ್​, ಸ್ಯಾಮ್ ಸಂಗ್ ಕೀ ಪ್ಯಾಡ್ ಮೊಬೈಲ್ ಸೇರಿ 52,000 ರೂಪಾಯಿ ಹಣ ದೋಚಿದ್ದಾರೆ. ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಬಾತ್‌ರೂಂನಲ್ಲಿ ಇಟ್ಟಿದ್ದ ಕೀ ತೆಗೆದು ಮನೆ ಕಳ್ಳತನ:

ಹುಬ್ಬಳ್ಳಿ: ವ್ಯಕ್ತಿಯೊಬ್ಬರು ಮನೆಯ ಬಾಗಿಲಿಗೆ ಬೀಗ ಹಾಕಿ ಕೀಲಿಯನ್ನು ಮನೆಯ ಪಕ್ಕದ ಸ್ನಾನದ ಕೋಣೆಯಲ್ಲಿಟ್ಟು ಹೋಗಿದ್ದನ್ನು ಗಮನಿಸಿದ ಅಪರಿಚಿತರು ಕಳವು ಮಾಡಿರುವ ಘಟನೆ ಹುಬ್ಬಳ್ಳಿ ಮರಾಠಾಗಲ್ಲಿ ಗಜಾನನ ಹೋಟೆಲ್ ಪಕ್ಕದ ಮನೆ ಬಿಲ್ಲಿಂಗ್‌ನ ಎರಡನೇ ಮಹಡಿಯಲ್ಲಿ ನಡೆದಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಮೂವರು ಡ್ರಗ್ ಪೆಡ್ಲರ್‌ಗಳು ಅಂದರ್​​!

ರಾಜೇಶ ಮಾನೆ ಎಂಬುವವರಿಗೆ ಸೇರಿದ್ದ ಮನೆ ಇದಾಗಿದ್ದು, ಇವರು ಸೆ .11 ರಂದು ಸಂಜೆ ಮನೆಗೆ ಬೀಗ ಹಾಕಿ ಹೊರಗಿದ್ದ ಬಾತ್ ರೂಂನಲ್ಲಿ ಕೀಲಿ ಇಟ್ಟು ತೆರಳಿದ್ದರು. ಇದನ್ನು ಗಮನಿಸಿದ ದುಷ್ಕರ್ಮಿಗಳು ಕೀಲಿಯನ್ನು ಬಳಸಿಕೊಂಡು ಮನೆ ಪ್ರವೇಶಿಸಿ ತಿಜೋರಿ ಮೇಲಿಟ್ಟಿದ್ದ ಕೀಲಿಯೂ ಅವರಿಗೆ ಸಿಕ್ಕಿತ್ತು. 8 ಗ್ರಾಂ ಚಿನ್ನಾಭರಣ, 51,000 ರೂ. ನಗದು ಹಾಗೂ 1 ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ABOUT THE AUTHOR

...view details