ಗಂಗಾವತಿ/ಹುಬ್ಬಳ್ಳಿ :ನಟ ಪುನೀತ್ ರಾಜಕುಮಾರ್ ಅವರು ಇಷ್ಟಪಡುತ್ತಿದ್ದ ಕೋಳಿ ಮತ್ತು ಕುರಿಯ ಬಾಡೂಟದ ರುಚಿಯನ್ನು ಅವರ ಕೆಲ ಅಭಿಮಾನಿಗಳು ಸೇರಿ ಸಾವಿರಾರು ಫ್ಯಾನ್ಸ್ಗೆ ಉಣಬಡಿಸಿ ಪುನೀತ್ ಅವರನ್ನು ಸ್ಮರಿಸಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಶಿವೆ ಚಿತ್ರಮಂದಿರದಲ್ಲಿ ಸುಮಾರು ಮೂರು ಲಕ್ಷ ರೂ. ವೆಚ್ಚದಲ್ಲಿ ಒಂದು ಸಾವಿರಕ್ಕೂ ಅಧಿಕ ಜನರಿಗೆ ಅಚ್ಚುಕಟ್ಟಾದ ಬಾಡೂಟದ ವ್ಯವಸ್ಥೆ ಮಾಡಿ ಅಭಿಮಾನಿಗಳಿಗೆ ಉಣಬಡಿಸಲಾಗಿದೆ.
ಪುನೀತ್ ಅವರ ಜನ್ಮದಿನ ಮತ್ತು ಜೇಮ್ಸ್ ಸಿನಿಮಾ ರಿಲೀಸ್ ಇದ್ದ ಕಾರಣ ಮಾರ್ಚ್ 17ರಂದು ಬಾಡೂಟದ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಶನಿವಾರ ಹೋಳಿ ಹಬ್ಬದ ಕಾರಣಕ್ಕೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಊಟಕ್ಕೆ ಬರುವುದಿಲ್ಲ ಎಂದು ಭಾವಿಸಿದ್ದ ಆಯೋಜಕರು, ಭಾನುವಾರ ಭರ್ಜರಿಯಾಗಿ ಬಾಡೂಟ ಹಾಕಿಸಿ ಪುನೀತ್ ಅವರನ್ನು ವಿಭಿನ್ನವಾಗಿ ಸ್ಮರಿಸಿದ್ದಾರೆ.
ಪುನೀತ್ ರಾಜಕುಮಾರ್ ಗೆ ಇಷ್ಟವಾದ ಸಾವಜಿ ಮಟನ್ ಊಟ ವಿತರಿಸಿ ವಿಭಿನ್ನವಾಗಿ ಅಪ್ಪು ಸ್ಮರಿಸಿದ ಅಭಿಮಾನಿಗಳು: