ಹುಬ್ಬಳ್ಳಿ: ಉತ್ತರ ಕರ್ನಾಟಕದ ಜನರಿಗೆ ಉತ್ತಮವಾದ ವೈದ್ಯಕೀಯ ಸೇವೆ ಒದಗಿಸಲು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಾಕಷ್ಟು ಸೇವೆ ಸಲ್ಲಿಸುತ್ತಿದೆ. ಆದರೆ, ಈಗ ಖಾಸಗಿ ಸಂಸ್ಥೆಯೊಂದು ಕಿಮ್ಸ್ ಸೇವೆಗೆ ಕೈ ಜೋಡಿಸುವ ಮೂಲಕ ಸಾರ್ವಜನಿಕ ಸೇವೆಗೆ ಮುಂದಾಗಿದೆ. ಇದರಿಂದ ಬಡಜನರಿಗೆ ಸಾಕಷ್ಟು ಅನುಕೂಲವಾಗುವುದಂತೂ ಖಂಡಿತ.
ಹುಬ್ಬಳ್ಳಿಯ "ದಿ ರೋಟರಿ ಫೌಂಡೇಶನ್"ನ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವತಿಯಿಂದ ಕಿಮ್ಸ್ಗೆ ಕಿಡ್ನಿ ಟ್ರಾನ್ಸ್ ಪ್ಲಾಂಟೇಶನ್ ಮತ್ತು ಡಯಾಲಿಸಿಸ್ ಮಾಡಲು ಬೇಕಿರುವ ಯಂತ್ರ ಮತ್ತು ಪರಿಕರಗಳನ್ನು ನೀಡಲು ಮುಂದಾಗಿದೆ. ಸುಮಾರು 40 ಲಕ್ಷ ಮೌಲ್ಯದ ಉಪಕರಣಗಳನ್ನು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವಿತರಿಸಲು ಸಿದ್ಧತೆ ಮಾಡಿಕೊಂಡಿದೆ. ಇನ್ನೂ ರೋಗಿಗಳಿಗೆ ಡಯಾಲಿಸಿಸ್ ಹಾಗೂ ಕಿಡ್ನಿ ಟ್ರಾನ್ಸ್ ಪ್ಲಾಂಟೇಶನ್ ಮಾಡಿಸಲು ಖಾಸಗಿ ಆಸ್ಪತ್ರೆಯಲ್ಲಿ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ ಈ ಸಹಾಯದಿಂದ ಬಡವರಿಗೆ ಉಪಯುಕ್ತವಾಗಲಿದೆ.