ಕರ್ನಾಟಕ

karnataka

ETV Bharat / city

ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್ ಸೌಲಭ್ಯ ಕೊರತೆ : ಹುಬ್ಬಳ್ಳಿಯಲ್ಲಿ ರೈಲ್ವೆ ಪ್ರಯಾಣಿಕರ ಪರದಾಟ

ಕೊರೊನಾ ಹಾವಳಿಯಿಂದ ರೈಲು ಸಂಚಾರ ಸ್ಥಗಿತಗೊಂಡು, ಪ್ರಯಾಣಿಕರಿಲ್ಲದೇ ಪ್ರಿಪೇಯ್ಡ್ ಆಟೋ ಸೇವೆಯನ್ನು ಬಂದ್ ಮಾಡಲಾಗಿತ್ತು. ಆದರೆ ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ಆರಂಭವಾಗಬೇಕಿದ್ದ ಆಟೋ ಸೇವೆ ಆರಂಭವಾಗಿಲ್ಲ. ಪ್ರಿಪೇಯ್ಡ್ ಆಟೋ ಸೇವೆಯನ್ನು ಮತ್ತೆ ಆರಂಭ ಮಾಡಿದ್ರೆ ಜನರಿಗೆ ಅನುಕೂಲ ಆಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.

By

Published : Jan 5, 2021, 8:13 PM IST

Prepaid Auto travel Facility stopped in hubli railway station
ಹುಬ್ಬಳ್ಳಿ ರೈಲ್ವೆ

ಹುಬ್ಬಳ್ಳಿ : ಕೊರೊನಾ ಮಹಾಮಾರಿಯ ಹಾವಳಿಯಿಂದ ಜನರು ತತ್ತರಿಸಿದ್ದು, ಲಾಕ್‌ಡೌನ್ ತೆರವಿನ ಬಳಿಕ ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ, ಸರ್ಕಾರದ ಯೋಜನೆಗಳ ಪುನಾರಂಭಕ್ಕೆ ಮಾತ್ರ ಇನ್ನೂ ಕೊರೊನಾ ಹಾವಳಿಯ ನೆಪವಾಗಿಯೇ ಉಳಿದಿದೆ.‌ ಇದರಿಂದಾಗಿ ಜನರಿಗೆ ಅನುಕೂಲಕರವಾಗಬೇಕಿದ್ದ ಯೋಜನೆಗಳು ಹಳ್ಳ ಹಿಡಿದಿವೆ. ಇದನ್ನೇ ಕೆಲವರು ದುರ್ಬಳಕೆ ಮಾಡಿಕೊಂಡು ಹಗಲು ದರೋಡೆ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ.

ಹುಬ್ಬಳ್ಳಿಯಲ್ಲಿ ರೈಲ್ವೆ ಪ್ರಯಾಣಿಕರ ಪರದಾಟ

ವಾಣಿಜ್ಯ ನಗರಿ‌ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲ ಆಗಲಿ ಅನ್ನೋ ಕಾರಣಕ್ಕೆ ಕಳೆದ ವರ್ಷ ಜನವರಿಯಲ್ಲಿ ಪ್ರಿಪೇಯ್ಡ್ ಆಟೋ ಸೇವೆಯನ್ನು ಆರಂಭಿಸಲಾಗಿತ್ತು. 1.6 ಕಿ.ಮೀಗೆ 28 ರೂಪಾಯಿ ಪಡೆಯುತ್ತಿದ್ದ ಆಟೋ ಚಾಲಕರು ತಮ್ಮ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದರು.

ಆರಂಭಿಕ ಹಂತದಲ್ಲಿ ಅವಳಿ ನಗರದಲ್ಲಿ ಓಡಾಡಿದ ಆಟೋಗಳು ಕೊರೊನಾ ಆತಂಕದಿಂದಾಗಿ ಸೇವೆಯನ್ನು ಸ್ಥಗಿತಗೊಳಿಸಿದ್ದವು. ಆದರೆ, ಇದೀಗ ರೈಲುಗಳು ಆರಂಭವಾದ್ರೂ ಪ್ರಿಪೇಯ್ಡ್ ಆಟೋ ಸೇವೆ ಆರಂಭವಾಗಿಲ್ಲ.‌ ಇದರಿಂದ ಜನರಿಗೆ ಅನಾನುಕೂಲ ಆಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಓದಿ-ಕೇಂದ್ರ ಸಚಿವ ಸದಾನಂದಗೌಡ ಗುಣಮುಖ​: ಆಸ್ಪತ್ರೆಯಿಂದ ಡಿಸ್ಚಾರ್ಜ್​

ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ಆರಂಭವಾಗಬೇಕಿದ್ದ ಆಟೋ ಸೇವೆ ಆರಂಭವಾಗಿಲ್ಲ. ಬೆಂಗಳೂರು ಮೂಲದ ಸಂಸ್ಥೆ ಪ್ರಿಪೇಯ್ಡ್ ಆಟೋ ಸೇವೆಯನ್ನು ನೀಡುತ್ತಿತ್ತು. ಅವಳಿ ನಗರದ ಜನತೆಗೆ ಕಡಿಮೆ ದರದಲ್ಲಿ ಆಟೋ ಸಂಚಾರಕ್ಕೆ ಅನುಕೂಲ ಕೂಡ ಮಾಡಿಕೊಡಲಾಗಿತ್ತು.

ಆದರೆ ಇದೀಗ ಆಟೋ ಸೇವೆ ಇಲ್ಲದ್ದರಿಂದ ಖಾಸಗಿ ಆಟೋಗಳು ಬೇಕಾಬಿಟ್ಟಿ ದರವನ್ನು ಪ್ರಯಾಣಿಕರಿಗೆ ಹೇರುತ್ತಿವೆ. ಪ್ರಯಾಣಿಕರಿಗೆ ಚೌಕಾಶಿ ಮೂಲಕ ಸಂಚಾರ ಮಾಡುವ ಆಟೋಗಳ ಚಾಲಕರು ಒಂದು ಕಿ.ಮೀಗೆ 30ರಿಂದ 50 ರೂ., ರಾತ್ರಿ ಹೊತ್ತು ದುಬಾರಿ ಬೆಲೆಯನ್ನು ನೀಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಪ್ರಿಪೇಯ್ಡ್ ಆಟೋ ಸೇವೆಯನ್ನು ಮತ್ತೆ ಆರಂಭ ಮಾಡಿದ್ರೆ ಜನರಿಗೆ ಅನುಕೂಲ ಆಗುತ್ತೆ ಅಂತಾರೆ ಸ್ಥಳೀಯರು.

ABOUT THE AUTHOR

...view details