ಕರ್ನಾಟಕ

karnataka

By

Published : Mar 19, 2020, 11:59 AM IST

ETV Bharat / city

ಅಧಿಕಾರಿಗಳ ನಿರ್ಲಕ್ಷ್ಯ ಆರೋಪ... ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಲ್ಲ ಥರ್ಮಲ್ ಸ್ಕ್ರೀನಿಂಗ್ ಮಷಿನ್!

ಕೊರೊನಾ ಭೀತಿ‌ಯಿಂದ ಎಲ್ಲಾ ಕಡೆ ಜಾಗೃತಿ ಮೂಡಿಸಲಾಗುತ್ತಿದೆ. ಆದ್ರೆ ರಾಜ್ಯದ ಮೂರನೇ ದೊಡ್ಡ ವಿಮಾನ ನಿಲ್ದಾಣ ಎಂಬ ಖ್ಯಾತಿ ಪಡೆದಿರುವ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತ್ರ ಇದುವರೆಗೂ ಥರ್ಮಲ್ ಸ್ಕ್ರೀನಿಂಗ್ ಮಷಿನ್ ಇಲ್ಲ ಎನ್ನಲಾಗ್ತಿದೆ.

Kn_hbl_02_danger_airport_av_7208089
ಅಧಿಕಾರಿಗಳ ನಿರ್ಲಕ್ಷ್ಯ, ಹುಬ್ಬಳ್ಳಿ ನಿಲ್ದಾಣದಲ್ಲಿಲ್ಲ ಥರ್ಮಲ್ ಸ್ಕ್ರೀನಿಂಗ್ ಮಷಿನ್...!

ಹುಬ್ಬಳ್ಳಿ:ಕೊರೊನಾ ಭೀತಿ‌ಯಿಂದ ಎಲ್ಲಾ ಕಡೆ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ, ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಥರ್ಮಲ್​ ಸ್ಕ್ರೀನಿಂಗ್​ ಟೆಸ್ಟ್​​ ಮಾಡಲಾತ್ತದೆ. ಆದ್ರೆ ರಾಜ್ಯದ ಮೂರನೇ ದೊಡ್ಡ ವಿಮಾನ ನಿಲ್ದಾಣ ಎಂಬ ಖ್ಯಾತಿ ಪಡೆದಿರುವ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತ್ರ ಇದುವರೆಗೂ ಥರ್ಮಲ್ ಸ್ಕ್ರೀನಿಂಗ್ ಮಷಿನ್ ಇಲ್ಲ ಎಂದು ಹೇಳಲಾಗ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯ ಆರೋಪ... ಹುಬ್ಬಳ್ಳಿ ನಿಲ್ದಾಣದಲ್ಲಿಲ್ಲ ಥರ್ಮಲ್ ಸ್ಕ್ರೀನಿಂಗ್ ಮಷಿನ್!

ಹೌದು, ಹುಬ್ಬಳ್ಳಿ ವಿಮಾನ ‌ನಿಲ್ದಾಣದ ಅಧಿಕಾರಿಗಳು ಕೊರೊನಾ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಸರ್ಕಾರ ಎಷ್ಟೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದ್ರೂ ಸಹ ಪ್ರಯಾಣಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಎಲ್ಲಾ ಜನನಿಬೀಡ ಪ್ರದೇಶಗಳಲ್ಲಿ ತಪಾಸಣೆ ಹಾಗೂ ಜಾಗೃತಿ ಘಟಕಗಳನ್ನು ಸ್ಥಾಪಿಸಲಾಗಿದೆ. ಆದ್ರೆ ವಾಣಿಜ್ಯ ನಗರಿಯ ವಿಮಾನ ನಿಲ್ದಾಣದಲ್ಲಿ ಮಾತ್ರ ಯಾವುದೇ ತಪಾಸಣಾ ಘಟಕಗಳು ಇಲ್ಲದಿರುವುದು ವಿಪರ್ಯಾಸವೇ ಸರಿ.

ಈ ಏರ್​ಪೋರ್ಟ್​ಗೆ ಆಗಮಿಸುವ ಜನರಲ್ಲಿ ಭಯದ ವಾತಾವರಣ ಕಂಡುಬರುತ್ತಿದೆ. ಪ್ರಯಾಣಿಕರು ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸಿಕೊಂಡು ಆಗಮಿಸುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ರಕ್ಷಣೆ ಇಲ್ಲ. ಜೀವಭಯದಲ್ಲೇ ಅವರು ಕೆಲಸ ಮಾಡುವ ಸ್ಥಿತಿ ಇದೆ. ಇನ್ನು ಮುಂದಾದರೂ ಜಿಲ್ಲಾಡಳಿತ ಹಾಗೂ ವಿಮಾನಯಾನ ಪ್ರಾಧಿಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ABOUT THE AUTHOR

...view details