ಧಾರವಾಡ :ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ (Karnatak University) ಪ್ರೊ.ಕೆ ಬಿ ಗುಡಸಿ (Prof. K.B. Gudasi) ಅವರು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಗೌರವ ಫೆಲೋಶಿಪ್ಗೆ ಪಾತ್ರರಾಗಿದ್ದಾರೆ.
ಕವಿವಿ ಕುಲಪತಿ ಗುಡಸಿ ಅವರಿಗೆ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಗೌರವ ಫೆಲೋಶಿಪ್ ಸಂಶೋಧನೆ ಮತ್ತು ವಿಜ್ಞಾನಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (Karnataka State Science and Technology Academy) ಪ್ರೊ. ಕೆ.ಬಿ.ಗುಡಸಿ ಅವರಿಗೆ ಗೌರವ ಫೆಲೋಶಿಪ್ ನೀಡಲಾಗಿದೆ.
ರಾಜ್ಯದ ವಿವಿಧ ವಲಯದ ವಿಜ್ಞಾನಿಗಳನ್ನು, ವಿಜ್ಞಾನ ಪರಿಣಿತರನ್ನು ಮತ್ತು ವಿಜ್ಞಾನ ಸಂವಹನಕಾರರನ್ನು ಗುರುತಿಸಿ ಫೆಲೋಶಿಪ್ ಮತ್ತು ಪ್ರಶಸ್ತಿಗಳಿಗೆ ಶಿಫಾರಸು ಮತ್ತು ಆಯ್ಕೆ ಮಾಡಲು ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಆಯ್ಕೆಯ ಮಂಡಳಿಯ (ಹಾನ್ರರಿ ಫೆಲೋಶಿಫ್) ಗೌರವ ಸದಸ್ಯರಾಗಿ ನಿಯುಕ್ತಿಗೊಂಡಿದ್ದಾರೆ.
ಬರುವ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಪ್ರೊ.ಕೆ.ಬಿ.ಗುಡಸಿ ಅವರಿಗೆ ಗೌರವ ಫೆಲೋಶಿಪ್ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಚೇರಮನ್ ಪ್ರೊ.ಎಸ್ ಅಯ್ಯಪ್ಪನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.