ಕರ್ನಾಟಕ

karnataka

ETV Bharat / city

ಆಭರಣ ಮಾಡಿಕೊಡುವುದಾಗಿ ನಂಬಿಸಿ ಎಸ್ಕೇಪ್ ಆದ ವಂಚಕರು

ಚಿನ್ನಾಭರಣ ಮಾಡುವ ಸಲುವಾಗಿ ಚಿನ್ನದ ಅಂಗಡಿ ಮಾಲೀಕ ನೀಡಿದ್ದ 5.5 ಲಕ್ಷ ರೂ. ಮೌಲ್ಯದ 108 ಗ್ರಾಂ ಚಿನ್ನದ ಸಮೇತ ಕೆಲಸಗಾರರು ಪರಾರಿಯಾಗಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ರತನ್ ಮಾಜಿ ಹಾಗೂ ನಾಸೀರ್ ಮಲ್ಲಿಕ್ ಚಿನ್ನದೊಂದಿಗೆ ಪರಾರಿಯಾದ ಕೆಲಸಗಾರರು ಎಂದು ತಿಳಿದುಬಂದಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ..

By

Published : Feb 23, 2022, 5:33 PM IST

gold-theft-case-in-hubballi
ಆಭರಣ ಮಾಡಿಕೊಡುವುದಾಗಿ ನಂಬಿಸಿ ಎಸ್ಕೇಪ್ ಆದ ವಂಚಕರು

ಹುಬ್ಬಳ್ಳಿ : ಚಿನ್ನಾಭರಣ ಮಾಡುವ ಸಲುವಾಗಿ ಚಿನ್ನದ ಅಂಗಡಿ ಮಾಲೀಕ ನೀಡಿದ್ದ 5.5 ಲಕ್ಷ ರೂ. ಮೌಲ್ಯದ 108 ಗ್ರಾಂ ಚಿನ್ನದ ಸಮೇತ ಕೆಲಸಗಾರರು ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ರತನ್ ಮಾಜಿ ಹಾಗೂ ನಾಸೀರ್ ಮಲ್ಲಿಕ್ ಚಿನ್ನದೊಂದಿಗೆ ಪರಾರಿಯಾದ ಕೆಲಸಗಾರರು.

ಇಲ್ಲಿನ ಶಾ ಬಜಾರ್, ಗೌಳಿ ಗಲ್ಲಿಯ ಮಿರಜುಲ್ ಸೈಯದಲಿ ಮೋಸ ಹೋದ ಚಿನ್ನದಂಗಡಿ ಮಾಲೀಕರಾಗಿದ್ದಾರೆ. ಈ ಹಿಂದೆ ರತನ್ ಮಾಜಿ ಹಾಗೂ ನಾಸೀರ್ ಮಲ್ಲಿಕ್ ಅವರು ಅಂಗಡಿಯ ಮಾಲೀಕ ಕೊಡುತ್ತಿದ್ದ ಗಟ್ಟಿ ಚಿನ್ನವನ್ನು ಪಡೆದು ಆಭರಣ ಮಾಡಿಕೊಡುತ್ತಿದ್ದರು.

ಆದರೆ, ಡಿ.15ರಂದು ರತನ್‌ಗೆ 55 ಗ್ರಾಂ ಹಾಗೂ ನಾಸೀರ್‌ಗೆ 53 ಗ್ರಾಂ ಚಿನ್ನದ ಗಟ್ಟಿ ಕೊಟ್ಟಿದ್ದರು. ಆದರೆ, ಇಬ್ಬರೂ ಆಭರಣ ಮಾಡಿಕೊಡದೇ ನಾಪತ್ತೆಯಾಗುವ ಮೂಲಕ ವಂಚಿಸಿದ್ದಾರೆ ಎಂದು ಸೈಯದಲಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ಕೇಸು ದಾಖಲಾಗಿದೆ.

ಓದಿ :ಮನಿ ಲಾಂಡ್ರಿಂಗ್​ ಕೇಸ್​: ಎನ್​ಸಿಪಿ ನಾಯಕ, ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಬಂಧನ

ABOUT THE AUTHOR

...view details