ಕರ್ನಾಟಕ

karnataka

ETV Bharat / city

ನೇತ್ರದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ರಂಗಕರ್ಮಿ ಜಿ.ಕೆ.ಗೋವಿಂದರಾವ್ - ನೇತ್ರದಾನ ಮಾಡಿದ ಜಿ.ಕೆ.ಗೋವಿಂದರಾವ್

ಹಿರಿಯ ರಂಗಕರ್ಮಿ ಹಾಗೂ ಕನ್ನಡದ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿದ್ದ ಜಿ.ಕೆ.ಗೋವಿಂದರಾವ್ ನಿಧನರಾಗಿದ್ದು, ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

Gk Govinda rao eye donation news
ನೇತ್ರದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಜಿ.ಕೆ.ಗೋವಿಂದರಾವ್

By

Published : Oct 15, 2021, 1:17 PM IST

ಹುಬ್ಬಳ್ಳಿ:ಹಿರಿಯ ಸಾಹಿತಿ ಹಾಗೂ ರಂಗಕರ್ಮಿ ಜಿ.ಕೆ.ಗೋವಿಂದರಾವ್ ಬೆಳಗಿನ ಜಾವ ಹುಬ್ಬಳ್ಳಿ ಗೋಲ್ಡನ್‌ ಟೌನ್‌ ಬಡಾವಣೆಯ ತಮ್ಮ ಪುತ್ರಿಯ ನಿವಾಸದಲ್ಲಿ ನಿಧನರಾಗಿದ್ದು, ಎರಡು ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ತೋರಿದ್ದಾರೆ.

ಗೋವಿಂದರಾವ್ ಅವರು ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ನೇತ್ರದಾನ ಮಾಡಿದ್ದಾರೆ. ಗೋವಿಂದರಾವ್ ಅವರ ಅಳಿಯ (ಶ್ಯಾಮಲಾ ಅವರ ಪತಿ) ಗುರುಪ್ರಸಾದ್ ಎಂ.ಎಂ. ಜೋಶಿ ಆಸ್ಪತ್ರೆಯಲ್ಲಿ ನೇತ್ರ ತಜ್ಞರಾಗಿದ್ದಾರೆ.

ತಮ್ಮ ಮರಣದ ಬಳಿಕ ನೇತ್ರದಾನ ಮಾಡಬೇಕು ಎಂಬುದು ಗೋವಿಂದರಾವ್ ಅವರ ಆಸೆಯಾಗಿತ್ತು. ಅದರಂತೆ ನೇತ್ರದಾನ ಮಾಡಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಇದನ್ನೂ ಓದಿ:ಹಿರಿಯ ಸಾಹಿತಿ, ನಟ ಜಿ.ಕೆ.ಗೋವಿಂದರಾವ್ ನಿಧನ: ಸಿಎಂ ಸೇರಿ ಗಣ್ಯರಿಂದ ಸಂತಾಪ

ABOUT THE AUTHOR

...view details