ಧಾರವಾಡ :ಕೊರೊನಾ ವೈರಸ್ ಹಾವಳಿಯಿಂದ ಈ ಬಾರಿಯೂ ಕೃಷಿಮೇಳ ಮುಂದೂಡುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರತಿವರ್ಷ ಆಯೋಜಿಸುತ್ತಿದ್ದ ನಾಲ್ಕು ದಿನಗಳ ಕೃಷಿಮೇಳಕ್ಕೆ ಕೊರೊನಾ ಕಾರ್ಮೋಡ ಆವರಿಸಿದೆ.
ಕೃಷಿಮೇಳಕ್ಕೂ ಕಲ್ಲು ಹಾಕಿದ ಕೊರೊನಾ.. ಅನ್ನದಾತರಿಗೆ ನಿರಾಶೆ - ಕೃಷಿಮೇಳ
ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸುತ್ತಿದ್ದ ಕೃಷಿಮೇಳದಲ್ಲಿ ಏಳು ಜಿಲ್ಲೆಯ ಕೃಷಿಕರು ಆಗಮಿಸಿ, ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಫಲಪುಷ್ಪ ಮೇಳ, ಮತ್ಸ್ಯಮೇಳ ಸೇರಿ ವಿವಿಧ ಕೃಷಿ ಯಂತ್ರೋಪಕರಣಗಳು ಅನ್ನದಾತರನ್ನು ಕೈಬೀಸಿ ಕರೆಯುತ್ತಿದ್ದವು..

ಕೃಷಿಮೇಳಕ್ಕೂ ತಟ್ಟಿದ ಕೊರೊನಾ ಬಿಸಿ..ಅನ್ನದಾತರಿಗೆ ನಿರಾಶೆ
ಕೃಷಿಮೇಳಕ್ಕೂ ತಟ್ಟಿದ ಕೊರೊನಾ ಬಿಸಿ.. ಅನ್ನದಾತರಿಗೆ ನಿರಾಶೆ
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸುತ್ತಿದ್ದ ಕೃಷಿಮೇಳದಲ್ಲಿ ಏಳು ಜಿಲ್ಲೆಯ ಕೃಷಿಕರು ಆಗಮಿಸಿ, ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಫಲಪುಷ್ಪ ಮೇಳ, ಮತ್ಸ್ಯಮೇಳ ಸೇರಿ ವಿವಿಧ ಕೃಷಿ ಯಂತ್ರೋಪಕರಣಗಳು ಅನ್ನದಾತರನ್ನು ಕೈಬೀಸಿ ಕರೆಯುತ್ತಿದ್ದವು.
ಆದರೆ, ಇದೀಗ ಕೃಷಿ ಮೇಳಕ್ಕೆ ಕೊರೊನಾ ಕಂಟಕ ಎದುರಾಗಿದೆ. ಇದರಿಂದ ವಿವಿ ವ್ಯಾಪ್ತಿಯ ಕೃಷಿಕರಿಗೆ ನಿರಾಶೆಯಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯಿಂದ ಮುಂದೂಡಿದ್ದ ಕೃಷಿಮೇಳವನ್ನು 2020 ಜನವರಿಯಲ್ಲಿ ಆಯೋಜಿಸಲಾಗಿತ್ತು. ಪ್ರಸಕ್ತ ಈ ತಿಂಗಳಲ್ಲಿ ಜರುಗಬೇಕಿದ್ದ ಕೃಷಿಮೇಳಕ್ಕೆ ಇದೀಗ ಕೊರೊನಾ ಕಂಟಕ ಎದುರಾಗಿದೆ.