ಕರ್ನಾಟಕ

karnataka

ETV Bharat / city

ದಾವಣಗೆರೆಯಲ್ಲಿ ಬೈಕ್​-ಲಾರಿ ನಡುವೆ ಭೀಕರ ಅಪಘಾತ....ಸ್ಥಳದಲ್ಲೇ ಇಬ್ಬರ ಸಾವು! - ದಾವಣಗೆರೆಯಲ್ಲಿ ಆಕ್ಸಿಡೆಂಟ್​

ಹರಿಹರ ತಾಲೂಕಿನ ಕೊಮಾರನಹಳ್ಳಿ ಬಳಿ ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ, ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ..

accident in davanagere
ದಾವಣಗೆರೆಯಲ್ಲಿ ಭೀಕರ ಅಪಘಾತ

By

Published : Jan 27, 2022, 12:12 PM IST

ದಾವಣಗೆರೆ: ದ್ವಿಚಕ್ರ ವಾಹನ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಮಾರನಹಳ್ಳಿ ಬಳಿ ನಡೆದಿದೆ.

ವಾಹನ ಅಪಘಾತದಲ್ಲಿ ಇಬ್ಬರು ಸಾವು

ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಶಿವರಾಜ್ (35) ಹಾಗೂ ಪ್ರಮೋದ್ (33) ಮೃತ ದುರ್ದೈವಿಗಳು. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಿಂದ ದಾವಣಗೆರೆಗೆ ಬೈಕ್​ನಲ್ಲಿ ಶಿವರಾಜ್​​ ಹಾಗೂ ಪ್ರಮೋದ್ ಬರುತ್ತಿದ್ದ ವೇಳೆ ಹಾವೇರಿಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದ್ದು, ಬೈಕ್​ನಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದಾರೆ.

ವಾಹನ ಅಪಘಾತದಲ್ಲಿ ಇಬ್ಬರು ಸಾವು

ಇದನ್ನೂ ಓದಿ:ತಾಂತ್ರಿಕ ಸಮಸ್ಯೆ: 12 ಗಂಟೆ ತಡವಾಗಿ ದುಬೈಗೆ ಪ್ರಯಾಣ ಬೆಳೆಸಿದ ವಿಮಾನ

ಮೃತ ಶಿವರಾಜ್ ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣ ನಿವಾಸಿ ಮತ್ತು ಮೃತ ಪ್ರಮೋದ್ ದಾವಣಗೆರೆ ನಗರದ ಬಂಬೂ ಬಜಾರ್ ನಿವಾಸಿಗಳೆಂದು ಗುರುತಿಸಲಾಗಿದೆ. ಈ ಘಟನೆ ಮಲೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details