ಕರ್ನಾಟಕ

karnataka

By

Published : Dec 8, 2021, 3:09 PM IST

ETV Bharat / city

ವಿದೇಶಗಳಿಂದ ದಾವಣಗೆರೆಗೆ ಬಂದ 66 ಜನ ಕ್ವಾರಂಟೈನ್​.. ಭಯ ಬೇಡ ಎಂದ ಜಿಲ್ಲಾಧಿಕಾರಿ

ವಿವಿಧ ದೇಶಗಳಿಂದ ಜಿಲ್ಲೆಗೆ ಒಟ್ಟು 66 ಜನ ಬಂದಿದ್ದಾರೆ. ಈ 66 ಜನರ ಪೈಕಿ ಕೊರೊನಾ ವೈರಸ್​ ಹೆಚ್ಚಾಗಿ ಕಾಣಿಸಿಕೊಂಡ ದೇಶಗಳಿಂದ 21 ಜನ ಬಂದಿದ್ದಾರೆ. ಅವರರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಜಿಲ್ಲೆಯ ಜನರಿಗೆ ತಿಳಿಸಿದರು.

mahantesh beelagi
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ:ವಿವಿಧ ದೇಶಗಳಿಂದ ಜಿಲ್ಲೆಗೆ ಒಟ್ಟು 66 ಜನ ಬಂದಿದ್ದಾರೆ. 66 ಜನರ ಪೈಕಿ ಕೊರೊನಾ ವೈರಸ್​ ಹೆಚ್ಚಾಗಿ ಕಾಣಿಸಿಕೊಂಡ ದೇಶಗಳಿಂದ 21 ಜನ ಬಂದಿದ್ದಾರೆ. ಅವರರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಜನ ಭಯಪಡುವ ಅಗತ್ಯ ಇಲ್ಲವೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬೆಣ್ಣೆನಗರಿ ಮಂದಿಗೆ ಹೇಳಿದ್ದಾರೆ.

ನಗರದಲ್ಲಿಂದು ಮನೆ‌ಮನೆಗೆ ಲಸಿಕೆ ಅಭಿಯಾನ ಆರಂಭಿಸಿ ಮಾತನಾಡಿದ ಅವರು, 66 ಜನರು ಕೂಡ ಕೊರೊನಾ ನೆಗೆಟಿವ್​ ವರದಿ ತಂದಿದ್ದಾರೆ. ಅವರೆಲ್ಲರ ಮೇಲೆ ನಿಗಾ ಇರಿಸಿದ್ದೇವೆ. 7 ದಿನಗಳ ಹೋಂಕ್ವಾರಂಟೈನ್ ಮುಗಿದ ಬಳಿಕ ಸರ್ಕಾರದ ನಿಯಮಾನುಸಾರ ಮತ್ತೊಮ್ಮೆ ಅವರನ್ನು ಟೆಸ್ಟ್ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಪರಿಷತ್ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ : ಮತಗಟ್ಟೆ, ಅಭ್ಯರ್ಥಿ ಹಾಗೂ ಮತದಾರರೆಷ್ಟು?

ಪರಿಸ್ಥಿತಿಯನ್ನು ನಿಯಂತ್ರಿಸಲು ನಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಜನ ಭಯಪಡುವ ಅಗತ್ಯ ಇಲ್ಲ ಎಂದರು.

ABOUT THE AUTHOR

...view details