ದಾವಣಗೆರೆ: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ನೂಪುರ್ ಶರ್ಮಾಳನ್ನು ಬಂಧಿಸಿ ಎಂದವರನ್ನು ಪೊಲೀಸರು ಬಂಧಿಸುತ್ತಿರುವುದು ತಪ್ಪು. ಕೂಡಲೇ ನೂಪುರ್ ಶರ್ಮಾ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮೊಹಮ್ಮದ್ ಹನೀಫ್ ಮೌಲಾನಾ ಒತ್ತಾಯಿಸಿದರು.
ನೂಪುರ್ ಶರ್ಮಾ ಬಂಧಿಸಿ ಕಾನೂನು ಕ್ರಮ ಜರುಗಿಸಲು ಒತ್ತಾಯ - ನೂಪುರ್ ಶರ್ಮಾ ಹೇಳಿಕೆ
ಹಿಂದೂ ಧರ್ಮದ ವಿರುದ್ಧ ಅವಹೇಳನ ಮಾಡಿದ್ರೆ ಹೇಗೆ ನೋವಾಗುತ್ತೋ ಹಾಗೆಯೇ ನಮಗೂ ಕೂಡ ನೋವಾಗುತ್ತದೆ ಎಂದು ಮೊಹಮ್ಮದ್ ಹನೀಫ್ ಮೌಲಾನಾ ಹೇಳಿದರು.
ಮೊಹಮ್ಮದ್ ಹನೀಫ್ ಮೌಲಾನಾ
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಶಾಂತಿ-ಸುವ್ಯವಸ್ಥೆ ಇಲ್ಲದಂತಾಗಿದೆ. ಕೋಮುಗಲಭೆಗಳು ಹೆಚ್ಚಾಗಿವೆ, ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ ಮಾಡುವುದು ಸಾಕಷ್ಟು ಬೇಸರ ತಂದಿದೆ. ಹಿಂದೂ ಧರ್ಮದ ವಿರುದ್ಧ ಅವಹೇಳನ ಮಾಡಿದ್ರೆ ಹೇಗೆ ನೋವಾಗುತ್ತೋ ಹಾಗೆ ನಮಗೂ ಕೂಡ ನೋವಾಗುತ್ತದೆ. ಈ ಘಟನೆಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಮರ್ಯಾದೆ ಹೋದಂತಾಗಿದೆ ಎಂದರು.
ಇದನ್ನೂ ಓದಿ:ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್; ವಿಚಾರಣೆಗೆ ಹಾಜರಾಗಲು ಸೂಚನೆ