ಕರ್ನಾಟಕ

karnataka

ಮನೆ ಮಕ್ಕಳು ಹೊಂದಿಕೊಂಡು ಹೋಗಬೇಕಿದೆ; ಬಿ.ವೈ. ರಾಘವೇಂದ್ರ

By

Published : Jan 17, 2021, 7:13 PM IST

ಬೇರೆ ಪಕ್ಷದ ಸ್ನೇಹಿತರು ರಾಜೀನಾಮೆ ನೀಡಿ ನಮ್ಮ ಪಕ್ಷಕ್ಕೆ ಬಂದರು, ಅದರಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂತು. ಮಾತುಕೊಟ್ಟಂತೆ ನಡೆದುಕೊಳ್ಳುವುದು ಅನಿವಾರ್ಯ. ಮನೆ ಮಕ್ಕಳು ಹೊಂದಿಕೊಂಡು ಹೋಗಬೇಕಿದ್ದು, ಅವರ ನೋವು ವ್ಯಕ್ತಪಡಿಸಿದ್ದಾರೆ. ಆಮೇಲೆ ಸರಿಯಾಗುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

everything-is-our-government-misfortune
ಸಂಸದ ಬಿವೈ ರಾಘವೇಂದ್ರ

ದಾವಣಗೆರೆ: ಶಾಸಕರಿಗೆ ಸಚಿವರಾಗಬೇಕು ಎನ್ನುವ ಆಸೆ ಇರುತ್ತದೆ. ದೌರ್ಭಾಗ್ಯದಿಂದ ನಮ್ಮ ಪಕ್ಷಕ್ಕೆ ಚುನಾವಣೆಯಲ್ಲಿ ಪೂರ್ಣ ಪ್ರಮಾಣದ ಸ್ಥಾನಗಳು ಬರ್ಲಿಲ್ಲ. ಹೀಗಾಗಿ ಬೇರೆ ಪಕ್ಷದ ಸ್ನೇಹಿತರ ಬೆಂಬಲದಿಂದ ಸರ್ಕಾರ ರಚಿಸಬೇಕಾಯಿತು ಎಂದು ಸಂಸದ ಬಿ.ವೈ. ವಿಜಯೇಂದ್ರ ಹೇಳಿದರು.

ನಮ್ಮ ದೌರ್ಭಾಗ್ಯ, ಏನ್ ಮಾಡೋದು, ನಮಗೆ ಸಂಪೂರ್ಣ ಮೆಜಾರಿಟಿ ಸಿಗಲಿಲ್ಲ

ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಅವರು, ಬೇರೆ ಪಕ್ಷದ ಸ್ನೇಹಿತರು ರಾಜೀನಾಮೆ ನೀಡಿ ನಮ್ಮ ಪಕ್ಷಕ್ಕೆ ಬಂದರು. ಅದರಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂತು. ಮಾತುಕೊಟ್ಟಂತೆ ನಡೆದುಕೊಳ್ಳುವುದು ಅನಿವಾರ್ಯ. ಮನೆ ಮಕ್ಕಳು ಹೊಂದಿಕೊಂಡು ಹೋಗಬೇಕಿದ್ದು, ಅವರ ನೋವು ವ್ಯಕ್ತಪಡಿಸಿದ್ದಾರೆ. ಅಮೇಲೆ ಸರಿಯಾಗುತ್ತದೆ ಎಂದರು.

ಓದಿ-ಏನಿದು1968ರ 'ತ್ರಿಭಾಷಾ ಸೂತ್ರ'? ಇದರಲ್ಲಿ ಹಿಂದಿ ಭಾಷೆಯ ಪಾತ್ರವೇನು?

ಕಾಫಿ ಕುಡಿಯಲು ರೇಣುಕಣ್ಣನ ಮೆನಗೆ ಬಂದಿದ್ದೆ

ಶಾಸಕ ಎಂ.ಪಿ. ರೇಣುಕಾಚಾರ್ಯರವರ ಮನೆಗೆ ಭೇಟಿ ನೀಡಿದ್ದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರೇಣುಕಾಚಾರ್ಯ ಅವರನ್ನು ಸಮಾಧಾನಪಡಿಸಲು ಬಂದಿರಲಿಲ್ಲ. ಸಹಜವಾಗಿ ಹೊನ್ನಾಳಿ ಕಡೆ ಬಂದ್ರೆ ರೇಣುಕಣ್ಣನ ಮನೆಗೆ ಬಂದು ಕಾಫಿ ಕುಡಿದು ಹೋಗ್ತಿನಿ. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ, ರೇಣುಕಾಚಾರ್ಯ ಅವರು ಯಾವತ್ತೂ ಪಕ್ಷ ಹಾಗೂ ಯಡಿಯೂರಪ್ಪನವರ ಪರವಾಗಿ ಗೌರವ ಇಟ್ಟುಕೊಂಡ ಯುವನಾಯಕರು ಎಂದು ಸ್ಪಷ್ಟಪಡಿಸಿದರು.

ಬೇರೆಯವರದ್ದು ಹೇಳುವ ಮುನ್ನ ತಮ್ಮ ತಳಹದಿಯನ್ನು ನೋಡಿಕೊಳ್ಳಬೇಕು

ಇನ್ನು ಎಪ್ರಿಲ್​ನಲ್ಲಿ ಸಿಎಂ ಬದಲಾವಣೆಯಾಗುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಭವಿಷ್ಯ ನಮ್ಮ ಕೈಯಲ್ಲಿ ಇರೋದಿಲ್ಲ, ಅದು ಅವರಿಗೂ ಅನುಭವವಾಗಿದೆ. ಬೇರೆಯವರದ್ದು ಹೇಳುವ ಮುನ್ನ ತಮ್ಮ ತಳಹದಿಯನ್ನು ನೋಡಿಕೊಳ್ಳಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ನವರಿಗೆ ಸಿಎಂ ಪುತ್ರ ಟಾಂಗ್ ನೀಡಿದರು.

TAGGED:

ABOUT THE AUTHOR

...view details