ಕರ್ನಾಟಕ

karnataka

ETV Bharat / city

ಸೋಲು-ಗೆಲುವು ಮುಖ್ಯ ಅಲ್ಲ, 17 ಜನರಿಗೂ ಪ್ರಾಮುಖ್ಯತೆ ಕೊಡಬೇಕು: ಎಂಟಿಬಿ - ಏನೇನು ಚರ್ಚೆ ಆಗಿದೆ ಅನ್ನೋದು ಸಿಎಂಗೆ ಗೊತ್ತು

ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಸೋಲು-ಗೆಲುವು ಮುಖ್ಯ ಅಲ್ಲ. 17 ಜನರಿಗೂ ಪ್ರಾಮುಖ್ಯತೆ ನೀಡಬೇಕು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

Kn_Bng_01_MtbnagarajByte_KA10002
ಸೋಲು ಗೆಲುವು ಮುಖ್ಯ ಅಲ್ಲ 17 ಜನಕ್ಕೂ ಪ್ರಾಮುಖ್ಯತೆ ಕೊಡಬೇಕು: ಎಂಟಿಬಿ ನಾಗರಾಜ್

By

Published : Jan 30, 2020, 2:49 PM IST

ಬೆಂಗಳೂರು:ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಸೋಲು-ಗೆಲುವು ಮುಖ್ಯ ಅಲ್ಲ. 17 ಜನರಿಗೂ ಪ್ರಾಮುಖ್ಯತೆ ನೀಡಬೇಕು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಎಂಟಿಬಿ ನಾಗರಾಜ್, ಮಾಜಿ ಸಚಿವ
17 ಜನ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದಾರೆ. ಅದರಲ್ಲಿ ನಾನೂ ಒಬ್ಬ. ಶಾಸಕ ಹಾಗೂ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದೇನೆ. ಆದ್ದರಿಂದ ಸೋಲು-ಗೆಲುವು ಮುಖ್ಯ ಅಲ್ಲ. 17 ಜನರಿಗೂ ಪ್ರಾಮುಖ್ಯತೆ ಕೊಡಬೇಕು. ಇದು ಪಕ್ಷ ಹಾಗೂ ಮುಖ್ಯಮಂತ್ರಿಗಳ ಕರ್ತವ್ಯ. ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅವರು ನಮ್ಮ ನಾಯಕರು. ರಾಜೀನಾಮೆ ಕೊಡುವಾಗ ಸಾಕಷ್ಟು ಚರ್ಚೆ ಮಾಡಿದ್ದೇವೆ. ಏನೇನು ಚರ್ಚೆ ಆಗಿದೆ ಅನ್ನೋದು ಸಿಎಂಗೆ ಗೊತ್ತು. ಆದ್ದರಿಂದ ಕೊಟ್ಟ ಮಾತಿಗೆ ಅವರು ತಪ್ಪೋರಲ್ಲ. ಮಾತಿನಂತೆ ನಡೆದುಕೊಳ್ತಾರೆ ಅನ್ನೋ ನಂಬಿಕೆ ಇದೆ ಎಂದರು. ಉಪ ಚುನಾವಣೆಯಲ್ಲಿ ಬಚ್ಚೇಗೌಡ ಬಿಜೆಪಿ ಪರ ಕೆಲಸ ಮಾಡದೇ ನನ್ನ ಸೋಲಿಗೆ ಕಾರಣರಾದರು. ಶರತ್ ಹಾಗೂ ಬಚ್ಚೇಗೌಡ ಅವರು ನಿಮ್ಮನ್ನ ಬೆಂಬಲಿಸ್ತಾರೆ ಅಂತಾ ಬಿಜೆಪಿ ನಾಯಕರು ಹೇಳಿದ್ದರು. ಹಾಗಾಗಿಯೇ ನಾನು ರಾಜೀನಾಮೆ ನೀಡಿದೆ ಎಂದರು.

ABOUT THE AUTHOR

...view details