ಕರ್ನಾಟಕ

karnataka

ETV Bharat / city

ಕಾಡು ಪ್ರಾಣಿಗಳ ಬೇಟೆಯಾಡಿ, ಹರಾಜು ನಡೆಸಿ ಸಂಭ್ರಮಪಟ್ಟ ಗ್ರಾಮಸ್ಥರು

ನೆಲಮಂಗಲದ ಯಂಟಗಾನಹಳ್ಳಿ ಜನರು ಕಾಡು ಪ್ರಾಣಿಗಳ ಬೇಟೆಯಾಡಿದ್ದಲ್ಲದೇ ಮೆರವಣಿಗೆ ನಡೆಸಿ, ಹರಾಜು ಕೂಗಿ ಸಂಭ್ರಮಿಸಿದ್ದಾರೆ.

By

Published : Jan 8, 2022, 1:04 PM IST

hunted and auctioned wild animals
ಕಾಡು ಪ್ರಾಣಿಗಳ ಬೇಟೆಯಾಡಿ, ಹರಾಜು ನಡೆಸಿ ಸಂಭ್ರಮಪಟ್ಟ ಗ್ರಾಮಸ್ಥರು

ನೆಲಮಂಗಲ: ಕಾಡು ಪ್ರಾಣಿಗಳ ಬೇಟೆಯಾಡಿದ್ದಲ್ಲದೇ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಗ್ರಾಮಸ್ಥರು ಬಹಿರಂಗವಾಗಿ ಹರಾಜು ಕೂಗಿ ಸಂಭ್ರಮಿಸಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಯಲ್ಲಿ ನಡೆದಿದೆ.

ಕಾಡು ಪ್ರಾಣಿಗಳ ಬೇಟೆಯಾಡಿ, ಹರಾಜು ನಡೆಸಿ ಸಂಭ್ರಮಪಟ್ಟ ಗ್ರಾಮಸ್ಥರು

ಕಾಡು ಪ್ರಾಣಿಗಳ ಬೇಟೆ ನಿಷೇಧದ ನಡುವೆಯೂ ಯಂಟಗಾನಹಳ್ಳಿ ಜನರು ಮೊಲ, ಕಾಡು ಕೋಳಿ, ಕೊಕ್ಕರೆಗಳನ್ನು ಭೇಟೆಯಾಡಿದ್ದಾರೆ. ಗ್ರಾಮದಲ್ಲಿ ತಮಟೆ ಬಾರಿಸಿಕೊಂಡು ಮೆರವಣಿಗೆ ಮಾಡಿ, ಹರಾಜು ನಡೆಸಿ ಕೋವಿಡ್ ನಿಯಮಗಳಿಗೆ ತಿಲಾಂಜಲಿ ಹಾಡಿದ್ದಾರೆ.

ಇದನ್ನೂ ಓದಿ: ಕೊರಗಜ್ಜನ ವೇಷ ಹಾಕಿ ವಿಕೃತಿ ಮೆರೆದ ವರ: ಆರೋಪಿಗಳ ವಿರುದ್ಧ ದೂರು ದಾಖಲು

ಕೊರೊನಾ ನಿಯಮ ಉಲ್ಲಂಘಿಸಿದ ಹಿನ್ನೆಲೆ ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details