ಹುಬ್ಬಳ್ಳಿ:ಬೆಂಗಳೂರಿಂದ ಹುಬ್ಬಳ್ಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮ, ವಿಶೇಷ ವಿಮಾನದಲ್ಲಿ ಮಧ್ಯಾಹ್ನ 1 ಗಂಟೆಗೆ ಪ್ರಯಾಣಿಸಲು ಅವರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಸಿಎಂ ಬೆಂಗಳೂರಿನಿಂದ ಬೆಳಿಗ್ಗೆ 8.45ಕ್ಕೆ ಬಿಟ್ಟು 9.45ಕ್ಕೆ ಹುಬ್ಬಳ್ಳಿ ತಲುಪಬೇಕಿತ್ತು. ಆದ್ರೆ ಟೇಕ್ ಆಫ್ ಕ್ಲಿಯರನ್ಸ್ ಆಗದ ಕಾರಣ ವಿಳಂಬವಾಗಿದೆ ಎಂದು ತಿಳಿದುಬಂದಿದೆ.
ಆರಂಭದಲ್ಲಿ ಎರಡು ಗಂಟೆಯ ಬಳಿಕ ವಿಮಾನ ಟೇಕ್ ಆಫ್ ಆಗಲಿದೆ ಎಂದು ತಿಳಿದುಬಂದಿತ್ತು. ಅದಕ್ಕಾಗಿ ಸಿಎಂ 2 ಗಂಟೆ ಕಾಯ್ದರೂ ಪ್ರಯೋಜನವಾಗದ ಕಾರಣ ಮಧ್ಯಾಹ್ನ 1 ಗಂಟೆಗೆ ಬೇರೆ ವಿಮಾನದಲ್ಲಿ ಪ್ರಯಾಣಿಸಲು ಸಿಎಂ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದಾಗಿ ಸಿಎಂ ಅವರಿದ್ದ ವಿಮಾನ 26 ನಿಮಿಷ ತಡವಾಗಿ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಿತ್ತು. ಇದೀಗ ಟೇಕ್ ಆಫ್ ಸಮಸ್ಯೆ ಆಗಿದೆ. ಈ ಮೂಲಕ ಸಿಎಂ ವಿಮಾನ ಯಾನಕ್ಕೆ ಆಗಾಗ ಸಮಸ್ಯೆ ಎದುರಾಗುತ್ತಿದೆ.
ಇದನ್ನೂ ಓದಿ:ಹವಾಮಾನ ವೈಪರೀತ್ಯ: ಹುಬ್ಬಳ್ಳಿಯಲ್ಲಿ ತಡವಾಗಿ ಲ್ಯಾಂಡ್ ಆದ ಸಿಎಂ ಪ್ರಯಾಣಿಸುತ್ತಿದ್ದ ವಿಮಾನ