ಕರ್ನಾಟಕ

karnataka

ETV Bharat / city

ಚಂದನವನದ ಉದಯೋನ್ಮುಖ ನಟನಿಂದ ಹನಿಟ್ರ್ಯಾಪ್​.. ಆರೋಪಿ ಬಂಧಿಸಿದ ಪೊಲೀಸರು - ಬೆಂಗಳೂರು ಅಪರಾಧ ಸುದ್ದಿ

ಚಂದನವನದ ಉದಯೋನ್ಮುಖ ನಟನಿಂದ ಹನಿಟ್ರ್ಯಾಪ್​ ನಡೆದಿದ್ದು, ಆರೋಪಿ ಯುವರಾಜ್​ನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

Sandalwood young actor arrested  young actor arrested in honeytrap case at Bengaluru  ಚಂದನವನದ ಉದಯೋನ್ಮಕ ನಟದಿಂದ ಹನಿಟ್ರ್ಯಾಪ್  ಯುವರಾಜ್​ನನ್ನು ಬಂಧಿಸಿದ ಪೊಲೀಸರು  Etv Bharat Karnataka news  ಈಟಿವಿ ಭಾರತ ಕರ್ನಾಟಕ ಸುದ್ದಿ  ಸ್ಯಾಂಡಲ್​ವುಡ್​​ ಉದಯೋನ್ಮುಖ ನಟ  ಫಿಟ್​ನೆಸ್ ಶಾಪ್ ನಡೆಸುತ್ತಿದ್ದ ಆರೋಪಿ  ಬೆಂಗಳೂರು ಅಪರಾಧ ಸುದ್ದಿ
ಚಂದನವನದ ಉದಯೋನ್ಮಕ ನಟದಿಂದ ಹನಿಟ್ರ್ಯಾಪ್

By

Published : Aug 13, 2022, 1:15 PM IST

Updated : Aug 13, 2022, 1:34 PM IST

ಬೆಂಗಳೂರು: ಉದ್ಯಮಿಗೆ ಹನಿ ಟ್ರ್ಯಾಪ್ ಮಾಡಿದ್ದ ಹಿನ್ನೆಲೆ ಸ್ಯಾಂಡಲ್​ವುಡ್​​ ಉದಯೋನ್ಮುಖ ನಟನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಬಂಧಿತ ಆರೋಪಿಯಗಿದ್ದಾನೆ. ಮಿಸ್ಟರ್ ಭೀಮರಾವ್ ಎಂಬ ಸಿನಿಮಾ ಮಾಡುವುದಾಗಿ ಯುವರಾಜ್ ಇನ್​​ಸ್ಟಾಗ್ರಾಂದಲ್ಲಿ ಪೋಸ್ಟ್ ಹಾಕಿಕೊಂಡಿದ್ದ.

ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿಕೆ

ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿ ಇತ್ತೀಚೆಗೆ ಪರಿಚಯ ಆಗಿದ್ದ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದರು. ನಂತರ ಉದ್ಯಮಿಗೆ ಯುವರಾಜ್​ ಭೇಟಿಯಾಗಿ ನಾವು ಕ್ರೈಮ್ ಪೊಲೀಸರು ಎಂದು ಹೇಳಿ ಹೆದರಿಸಿದ್ದರು. ಯುವತಿಯರ ಜೊತೆಗೆ ಅಶ್ಲೀಲ ಚಾಟ್ ಕುರಿತು ನಿಮ್ಮ ಮೇಲೆ ಕೇಸ್ ದಾಖಲಾಗಿದೆ. ಈ ಕೇಸ್ ಮುಂದುವರೆಸದಿರಲು ಹಣ ನೀಡುವಂತೆ ಕೇಳಿದ್ದ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಫಿಟ್​ನೆಸ್ ಶಾಪ್ ನಡೆಸುತ್ತಿದ್ದ ಆರೋಪಿ:ಉದ್ಯಮಿಯಿಂದಮೊದಲು ಐವತ್ತು ಸಾವಿರ ಪಡೆದ ಆರೋಪಿ ನಂತರ ಬ್ಯಾಂಕ್​ನಲ್ಲಿ ಮೂರು ಲಕ್ಷ ಡ್ರಾ ಮಾಡಿಸಿಕೊಂಡಿದ್ದ. ಹಂತ ಹಂತವಾಗಿ ಆರೋಪಿ ಯುವರಾಜ್​ ಒಟ್ಟು ಹದಿನಾಲ್ಕು ಲಕ್ಷಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದಾನೆ. ಇದರಿಂದ ಬೇಸತ್ತ ಸಂತ್ರಸ್ತ ಉದ್ಯಮಿ ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಆರೋಪಿ ಯುವರಾಜ್​ನನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲ ಯುವರಾಜ್ ಮತ್ತು ಉದ್ಯಮಿಗೆ ಚಾಟ್ ಮಾಡಿದ್ದ ಯುವತಿ ಕವನಾ ಒಟ್ಟಿಗೆ ಫಿಟ್​ನೆಸ್ ಶಾಪ್ ನಡೆಸುತ್ತಿದ್ದಾರೆ ಎಂದು ಶ್ರೀನಿವಾಸ್ ಗೌಡ ಹೇಳಿದ್ದಾರೆ. ಭೀಮರಾವ್ ಎನ್ನುವ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ ಎಂದು ತಿಳಿದು ಬಂದಿದೆ.

ಓದಿ:ಪರ್ಲ್​ ಪುರಿ ವಿರುದ್ಧ ಅತ್ಯಾಚಾರ ಆರೋಪ: ನಟನ​ ಬೆಂಬಲಿಸಿ ನಿರ್ದೇಶಕಿ ದಿವ್ಯಾ ಖೋಸ್ಲಾ ಪೋಸ್ಟ್​​

Last Updated : Aug 13, 2022, 1:34 PM IST

ABOUT THE AUTHOR

...view details