ಬೆಂಗಳೂರು :ಮಧುಮೇಹ (ಡಯಾಬಿಟಿಸ್) ನಿಯಂತ್ರಣಕ್ಕೆ ನಾರಾಯಣ ನೇತ್ರಾಲಯದಲ್ಲಿ ಹೊಸದಾಗಿ "ರಿವರ್ಸಿಂಗ್ ಡಯಾಬಿಟಿಸ್" ಕ್ಲಿನಿಕ್ ಆರಂಭಿಸಲಾಗಿದೆ.
ರಿವರ್ಸಿಂಗ್ ಡಯಾಬಿಟಿಸ್ ಕುರಿತು ನಾರಾಯಣ ನೇತ್ರಾಲಯದ ಎಂಡಿ ಡಾ. ಭುಜಂಗಶೆಟ್ಟಿ ಪ್ರತಿಕ್ರಿಯೆ ನೀಡಿರುವುದು.. ಮಧುಮೇಹ 20 ವರ್ಷದಿಂದ 75 ವರ್ಷ ವಯಸ್ಸಿನವರಲ್ಲಿಯೂ ಕುರುಡುತನಕ್ಕೆ ಕಾರಣವಾಗಲಿದೆ. ಇದನ್ನು ತಡೆಯಲು ಆಹಾರ ಸೇವನೆ ಹೇಗಿರಬೇಕು?, ಯಾವ ಪದಾರ್ಥಗಳನ್ನು ನಿಯಂತ್ರಣದಲ್ಲಿಡಬೇಕೆಂಬುದರ ಬಗ್ಗೆ 15 ತಜ್ಞರ ತಂಡದಿಂದ ಚಿಕಿತ್ಸೆ ಸಿಗಲಿದೆ.
ನಾರಾಯಣ ನೇತ್ರಾಲಯ ಆಸ್ಪತ್ರೆ ವೈದ್ಯರ ತಂಡದಿಂದ ರಿವರ್ಸ್ ಡಯಾಬಿಟಿಸ್ ಕ್ಲಿನಿಕ್ ಆರಂಭವಾಗಿದೆ. ಮಧುಮೇಹ ಬರದಂತೆ ಚಿಕಿತ್ಸೆ ನೀಡಿ ಕಾಯಿಲೆ ತಡೆಗಟ್ಟಲು ಮುಂದಾಗಿದ್ದಾರೆ.
ನಾರಾಯಣ ನೇತ್ರಾಲಯದಿಂದ ರಿವರ್ಸ್ ಡಯಾಬಿಟಿಸ್ ಕುರಿತು ಸಂಶೋಧನೆ ನಡೆದಿದೆ. ಸ್ವತಃ 20 ವರ್ಷದಿಂದ ಡಯಾಬಿಟಿಸ್ ಹೊಂದಿದ್ದ ನಾರಾಯಣ ನೇತ್ರಾಲಯದ ಎಂಡಿ ಡಾ. ಭುಜಂಗ ಶೆಟ್ಟಿ ಅದರಿಂದ ಹೊರ ಬಂದು ತಮ್ಮ ಜೀವನ ಸಾಧನೆಯನ್ನೇ "ರಿವರ್ಸಿಂಗ್ ಡಯಾಬಿಟಿಸ್" ಚಿಕಿತ್ಸೆ ವಿಧಾನ ಕಂಡು ಹಿಡಿಯಲು ಪ್ರೇರೇಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಭುಜಂಗ ಶೆಟ್ಟಿ, ಆಹಾರ ಪದ್ಧತಿಯಿಂದ ರಿವರ್ಸ್ ಡಿಯಾಬಿಟಿಕ್ಸ್ ಟ್ರೀಟ್‌ಮೆಂಟ್ ಸಾಧ್ಯ. ಸಕ್ಕರೆಯನ್ನು ಸಂಪೂರ್ಣ ಬಿಡಬೇಕು. ಸೀಡ್ ಆಯಿಲ್ ಹಾಗೂ ವೆಜಿಟೇಬಲ್ ಆಯಿಲ್ ಅನ್ನು ತೆಗೆದುಕೊಳ್ಳಲಿಲ್ಲ. ಅನ್ನ, ಚಪಾತಿ ಹಾಗೂ ಗೋಧಿ ಪದಾರ್ಥವನ್ನು ತಿನ್ನುವುದು ನಿಲ್ಲಿಸಿದೆ.
ಹೆಚ್ಚು ಸಿಹಿ ಇರುವ ಹಣ್ಣುಗಳಿಂದ ದೂರ ಇರಬೇಕು. ಇದರಿಂದ ನನ್ನ ಶುಗರ್ ಲೆವೆಲ್ ಕಡಿಮೆಯಾಗಿದೆ. ಕಳೆದ 6 ತಿಂಗಳಿನಿಂದ ನಾನು ಈ ಆಹಾರ ಪದ್ಧತಿಯನ್ನು ಮಾಡುತ್ತಾ ಬಂದಿದ್ದೇನೆ. ಇದರಿಂದ ರಿವರ್ಸ್ ಡಯಾಬಿಟಿಸ್ ಮಾಡೋದು ಹೇಗೆ ಅನ್ನೋದು ತಿಳಿದಿದೆ. ನಾನು ದಿನಕ್ಕೆ 12 ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಈಗ ಈ ಹೊಸ ಪದ್ಧತಿಯಿಂದ ನನ್ನ ಶುಗರ್ ಲೆವೆಲ್ ಸಮತೋಲನದಲ್ಲಿದೆ ಎಂದರು.
ನಾರಾಯಣ ನೇತ್ರಾಲಯ ರಾಜಾಜಿನಗರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಶಾಖೆಗಳಲ್ಲಿ ಈ ಕ್ಲಿನಿಕ್ ಸ್ಥಾಪನೆಯಾಗಿದೆ. ನಾರಾಯಣ ನೇತ್ರಾಲಯದಲ್ಲಿ ಪ್ರತಿದಿನ ಸರಾಸರಿ 1,500 ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಇದರಲ್ಲಿ ಸುಮಾರು ಶೇ.60-70ರಷ್ಟು ರೋಗಿಗಳು ಮಧುಮೇಹ ಹೊಂದಿರುತ್ತಾರೆ.
ಕಾರ್ಬೋಹೈಡ್ರೇಟ್ ಕಡಿಮೆ ಮಾಡುವುದು, ಉತ್ತಮ ಕೊಬ್ಬುಗಳು ಮತ್ತು ಪ್ರೋಟೀನ್ಗಳನ್ನು ಸೇವಿಸುವುದು ಮಧುಮೇಹ ನಿಯಂತ್ರಿಸಲು ಸಕ್ಕರೆ ಮತ್ತು ಹೆಚ್ಚು ಸಂಸ್ಕರಿಸಿದ ಸಸ್ಯಜನ್ಯ ಎಣ್ಣೆಗಳನ್ನು ತ್ಯಜಿಸುವುದು ನಂತರ ವೈಯಕ್ತಿಕ ಚಯಾಪಚಯ ಕ್ರಿಯೆಯ ಆಧಾರದ ಮೇಲೆ ಪ್ರತಿಯೊಬ್ಬ ವ್ಯಕ್ತಿಗೆ ಸೂಕ್ತ ಮೆನುವನ್ನು ಕಂಡು ಹಿಡಿಯಬೇಕಾಗುತ್ತದೆ ಎಂದು ಡಾ.ಭುಜಂಗ ಶೆಟ್ಟಿ ತಿಳಿಸಿದರು.