ಬೆಂಗಳೂರು:ಕಾಂಗ್ರೆಸ್ ಮೋಸದ ಸಂಸ್ಕೃತಿಯಿರುವ ಪಾರ್ಟಿ ಹಾಗೂ ಬ್ರಿಟಿಷರು ಬಿಟ್ಟು ಹೋದ ಪಕ್ಷ. ಅದರ ಮೊದಲ ಅಧ್ಯಕ್ಷರೂ ಕೂಡಾ ಇಂಗ್ಲೆಂಡಿನವರೇ ಆಗಿದ್ದು, ಮೋಸದ ಚಾಳಿ ಮುಂದುವರೆದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
''ಕಾಂಗ್ರೆಸ್ ಮೋಸದ ಸಂಸ್ಕೃತಿ ಪಕ್ಷ: ಇನ್ನೂ ಅದೇ ಚಾಳಿ ಮುಂದುವರೆದಿದೆ’’, ಅಶೋಕ್ ವಾಗ್ದಾಳಿ - ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ರಾಮನಗರದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಆರ್.ಅಶೋಕ್
ರಾಮನಗರದ ಕಂದಾಯ ಭವನದಲ್ಲಿ ಮಾತನಾಡಿದ ಅವರು ಜೆಡಿಎಸ್ನವರನ್ನ ಕಾಂಗ್ರೆಸ್ನವರು ಇಷ್ಟು ದಿನ ಮೋಸದ ಬಲೆಗೆ ಬೀಳಿಸಿಕೊಂಡಿದ್ದರು. ಈಗ ಅವರ ಮೋಸ ಜೆಡಿಎಸ್ ನವರಿಗೆ ಗೊತ್ತಾಗಿದೆ. ನಾವು ಜೆಡಿಎಸ್ನೊಂದಿಗೆ ಸರ್ಕಾರ ಮಾಡಿದ್ದೇವೆ. ಅಭಿವೃದ್ಧಿಗೆ ಯಾರೇ ಸಹಕಾರ ಮಾಡಿದ್ರೂ ನಾವು ಜೊತೆಗಿರುತ್ತೇವೆ ಎಂದರು
ರಾಜ್ಯಸಭಾ ಚುನಾವಣೆ ಬಗ್ಗೆ ಮಾತನಾಡಿದ ಅವರು ಈ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಸಭೆಯಲ್ಲಿ ಚುನಾವಣೆ ಬಗ್ಗೆ ಚರ್ಚೆ ನಡೆಸಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.