ಕರ್ನಾಟಕ

karnataka

ETV Bharat / city

'ಕೊರೊನಾ ವಾರಿಯರ್ಸ್​ ಗೌರವಿಸಿದ್ರೆ ಮಾತ್ರ ಕೊರೊನಾ ವಾರ್ ಗೆಲ್ಲೋಕೆ ಸಾಧ್ಯ'

ಕೊರೊನಾ ವಾರಿಯರ್ಸ್​ ಅನ್ನು ಗೌರವಿಸಿದರೆ ಮಾತ್ರ ಕೊರೊನಾದೊಂದಿಗಿನ ಯುದ್ಧ ಗೆಲ್ಲಲು ಸಾಧ್ಯ ಎಂದು ಸಚಿವ ಎಸ್‌.ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

corona warriors
ಕೊರೊನಾ ವಾರಿಯರ್ಸ್

By

Published : May 10, 2020, 4:21 PM IST

ಬೆಂಗಳೂರು: ಮೂರನೇ ಮಹಾಯುದ್ಧವನ್ನು ಇಡೀ ವಿಶ್ವ ಕೊರೊನಾ ವಿರುದ್ಧ ಎದುರಿಸುತ್ತಿದೆ. ನಮ್ಮ ನಡೆ‌ನುಡಿಗಳ ಕೊರೊನಾ ವಾರಿಯರ್ಸ್​ ಅನ್ನು ಗೌರವಿಸೋದನ್ನು ಕಲಿತರೆ ಮಾತ್ರ ನಾವು ಈ ವಿಶ್ವಯುದ್ಧವನ್ನು ಗೆಲ್ಲಲು ಸಾಧ್ಯ ಎಂದು ಸಚಿವ ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.

ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಮಾತನಾಡಿದ ಅವರು, ಕೊರೊನಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರು, ಆರೋಗ್ಯ, ಪೊಲೀಸ್ ಸಿಬ್ಬಂದಿ, ಪೌರ ಕಾರ್ಮಿಕರನ್ನು ಪುಷ್ಪಾರ್ಚನೆಯ ಮೂಲಕ‌ ಸನ್ಮಾನಿಸಿದರು.‌

ಕೊರೊನಾ ವಾರಿಯರ್ಸ್‌

ಕೊರೊನಾ ಮಹಾಮಾರಿ ರಾಜ್ಯದಲ್ಲಿ ನಿಯಂತ್ರಣದಲ್ಲಿರುವುದಕ್ಕೆ ಹಗಲಿರುಳೆನ್ನದೆ ಜನ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲಾ ಕೊರೊನಾ ವಾರಿಯರ್ಸ್‌ ನೇರ ಕಾರಣ ಎಂದ ಸುರೇಶ್ ಕುಮಾರ್, ಕೊರೊನಾ ಒಡ್ಡುತ್ತಿರುವ ಬಹುಮುಖಿಯಾದ ಸವಾಲುಗಳನ್ನು ಎದುರಿಸಲು ಪ್ರತಿ ವ್ಯಕ್ತಿಯೂ ತಮ್ಮ ಆಚಾರ ವಿಚಾರಗಳಲ್ಲಿ‌ ಸಕಾರಾತ್ಮಕ ಬದಲಾವಣೆಗಳನ್ನು ತಂದುಕೊಳ್ಳಬೇಕು. ವೈಯಕ್ತಿಕ‌ ಸ್ವಚ್ಛತೆ, ಸಮುದಾಯ ಸ್ವಚ್ಛತೆಯಷ್ಟೇ ಸಾಮಾಜಿಕ ಸ್ವಾಸ್ಥ್ಯವನ್ನು ಪ್ರೇರೇಪಿಸುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕೆಂದರು.

ಕೊರೊನಾ ಪೂರ್ವ ಹಾಗೂ ಕೊರೊನಾ ನಂತರದ ದಿನಗಳು ಮುಂದಿನ‌ ದಿನಗಳಲ್ಲಿ ನಮ್ಮ ಜೀವನಶೈಲಿಯಾಗುವ ಕಾರಣ, ಇದಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಈ ಹೋರಾಟದಲ್ಲಿ ಕೊನೆಯ ಗೆಲುವು ಮನುಕುಲದ್ದಾಗಬೇಕೆಂದರು.

ಈ ವೇಳೆ ಸುಮಾರು ಇನ್ನೂರಕ್ಕೂ ಹೆಚ್ಚು ಪೌರ ಸಿಬ್ಬಂದಿ, ಪೊಲೀಸ್, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಕೊರೊನಾ ವಾರಿಯರ್ಸ್‌ಗಳನ್ನು​​ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ‌ ಭಾಸ್ಕರ್ ರಾವ್, ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್ ಹಾಗೂ ಸ್ಥಳೀಯ ಬಿಬಿಎಂಪಿ ಸದಸ್ಯೆ ದೀಪಾ ನಾಗೇಶ್ ಸಾಥ್ ನೀಡಿದರು.

ABOUT THE AUTHOR

...view details