ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ ಕೋವಿಡ್‌ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಒಬ್ಬರಿಗೆ ಕಾನೂನುಬದ್ಧ ವಾರಸುದಾರರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ 1 ಲಕ್ಷ ರೂ. ಪಾವತಿಸಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ವಾರಸುದಾರರಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್‌ಡಿಆರ್‌ಎಫ್) ಯಿಂದ ರೂ. 50,000 ರೂ. ಗಳನ್ನು ಪಾವತಿಸಲು ಅನುಮತಿ ಸಿಕ್ಕಿದೆ. ಹೀಗಾಗಿ ಬಿಪಿಎಲ್ ಕುಟುಂಬದ ವ್ಯಕ್ತಿಗೆ ನೀಡುವ ಪರಿಹಾರ 1.5 ಲಕ್ಷ ರೂಪಾಯಿ ಆಗಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನುಬದ್ಧ ವಾರಸುದಾರರಿಗೆ ಪರಿಹಾರ ಹಣವನ್ನು ನೀಡುವ ಬಗ್ಗೆ ಈ ಮಾರ್ಗಸೂಚಿಗನ್ನು ಬಿಬಿಎಂಪಿ ಹೊರಡಿಸಿದೆ.
30 ದಿನದೊಳಗೆ ಕೋವಿಡ್ ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ವಿತರಣೆ ಕಡ್ಡಾಯ 1. ವ್ಯಕ್ತಿಯು ರಾಜ್ಯದ ಯಾವುದೇ ಭಾಗದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದರೂ ವಾಸಸ್ಥಳ ವ್ಯಾಪ್ತಿಯಲ್ಲಿಯೇ ಅರ್ಜಿ ಸಲ್ಲಿಸಬೇಕು ಹಾಗೂ ನಿಯಮದಂತೆ, ಅರ್ಹತೆ ಮಾನದಂಡದಂತೆ ಕ್ರಮವಹಿಸಬೇಕು. 2. ಪಾಲಿಕೆಯ ವಾರ್ಡ್ ಕಛೇರಿಗಳಲ್ಲಿ ಕಾನೂನುಬದ್ಧ ವಾರಸುದಾರರಿಂದ ಅರ್ಜಿಗಳನ್ನು ಸ್ವೀಕರಿಸಲು ಅಗತ್ಯ ಕ್ರಮವಹಿಸುವುದು.3. ಸಂಬಂಧಪಟ್ಟ ಕಂದಾಯ ಪರಿವೀಕ್ಷಕರು ಸ್ವೀಕರಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ವಾಸ ಸ್ಥಳ ಪರಿಶೀಲನೆ, ಕೋವಿಡ್-19 ಸೋಂಕಿನಿಂದ ಮೃತಪಟ್ಟಿರುವ ಸಂಬಂಧ ಮಹಜರ್ ಪಡೆದುಕೊಂಡು ಸೂಕ್ತ ವರದಿಯೊಂದಿಗೆ ಸಹಾಯಕ ಕಂದಾಯ ಅಧಿಕಾರಿಗಳಿಗೆ ಸಲ್ಲಿಸುವುದು.4. ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಹಾಗೂ ಅರ್ಜಿದಾರರ ಆಧಾರ್, ಪಡಿತರ ಚೀಟಿ, ಮರಣ ಪ್ರಮಾಣ ಪತ್ರ(ಇ-ಜನ್ಮ) ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಿದ್ದು, ವರದಿಯನ್ನು ಪರಿಶೀಲಿಸಿ, ಕೋವಿಡ್ ಮರಣ ಎಂಬುದನ್ನು ಸಂಬಂಧಿಸಿದ ಆರೋಗ್ಯ ವೈದ್ಯಾಧಿಕಾರಿಗಳಿಂದ ಖಚಿತಪಡಿಸಿಕೊಂಡು ಕೆಲಸದ 7 ದಿನಗಳೊಳಗಾಗಿ ಸಹಾಯಕ ಕಂದಾಯ ಅಧಿಕಾರಿಯವರು ವರದಿಯನ್ನು ತಂತ್ರಾಂಶದಲ್ಲಿ ನಮೂದಿಸಿ, ಅನುಮೋದನೆ ನೀಡಿ ಕಂದಾಯ ಅಧಿಕಾರಿಗಳಿಗೆ ಸಲ್ಲಿಸುವುದು.5. ಕಂದಾಯ ಅಧಿಕಾರಿಗಳು ನೀಡಿರುವ ವರದಿಯನ್ನು ಪರಿಶೀಲಿಸಿ ವಲಯ ಉಪ ಆಯುಕ್ತರವರ ಶಿಫಾರಸ್ಸಿನೊಂದಿಗೆ ವಲಯ ಜಂಟಿ ಆಯುಕ್ತರವರಿಗೆ ನೀಡುವುದು.6. ಸಹಾಯಕ ಕಂದಾಯ ಅಧಿಕಾರಿರವರಿಂದ ತಂತ್ರಾಂಶದಲ್ಲಿ ವರ್ಗಾವಣೆಗೊಂಡ ಅರ್ಜಿ ಮತ್ತು ವಲಯ ಉಪ ಆಯುಕ್ತರವರಿಂದ ಶಿಫಾರಸ್ಸು ಹೊಂದಿರುವ ಅರ್ಜಿಯಲ್ಲಿನ ಕೋವಿಡ್ ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಸಾವಿನ ವಿವರಗಳನ್ನು ವಲಯ ಆರೋಗ್ಯ ವೈದ್ಯಾಧಿಕಾರಿಗಳಿಂದ ಖಚಿತಪಡಿಸಿಕೊಂಡು, ಊರ್ಜಿತ ಅರ್ಜಿಯನ್ನು ಕೆಲಸದ 7 ದಿನಗಳೊಳಗಾಗಿ ಅನುಮೋದಿಸಿ, ಪರಿಹಾರ ವಿತರಣೆಗಾಗಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯಕ್ಕೆ ವಲಯ ಜಂಟಿ ಆಯುಕ್ತರು ತಂತ್ರಾಂಶದ ಮೂಲಕ ವರ್ಗಾಯಿಸುವುದು. ಕೋವಿಡ್-19 ಮರಣ ದೃಢೀಕರಿಸುವುದು ಹಾಗೂ ಕುಂದುಕೊರತೆಗಳ ನಿವಾರಣೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಪ್ರತಿ ವಲಯ ವ್ಯಾಪ್ತಿಯಲ್ಲಿ ಸಮಿತಿಯನ್ನು ರಚಿಸುವುದು.
ಸಮಿತಿಯು ಪರಿಶೀಲಿಸಿ ಈ ಕೆಳಗಿನಂತೆ ಕ್ರಮವಹಿಸುವುದು:1. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರು ಸ್ವೀಕರಿಸಿ, ಸಂಬಂಧಿಸಿದ ವಲಯ ಸಮಿತಿಗೆ ವರ್ಗಾಯಿಸುವುದು.2. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಮಿತಿಯು ಪ್ರಕರಣವನ್ನು ಮಾರ್ಗಸೂಚಿಯನುಸಾರ ಪರಿಶೀಲಿಸಿ, ನಿಗಧಿತ ನಮೂನೆಯಲ್ಲಿ (ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕೃತ ಜ್ಞಾಪನದಲ್ಲಿ ಒದಗಿಸಿರುವ ಅನುಬಂಧ-2 ರಂತೆ) ಕೋವಿಡ್ ಸಾವು ಕುರಿತಂತೆ ಅಧಿಕೃತ ತಿದ್ದುಪಡಿ ಮರಣ ಪ್ರಮಾಣ ಪತ್ರ ವಿತರಿಸುವುದು.3. ಮೇಲಿನಂತೆ ಹೊರಡಿಸಲಾದ ಅಧಿಕೃತ ತಿದ್ದುಪಡಿ ಮರಣ ಪ್ರಮಾಣ ಪತ್ರದ ಮಾಹಿತಿಯನ್ನು ತಪ್ಪದೇ ರಾಜ್ಯದ ಜನನ ಮತ್ತು ಮರಣ ಮುಖ್ಯ ನೋಂದಣಾಧಿಕಾರಿಳಿಗೆ ಸಲ್ಲಿಸುವುದು.4. ಅಧಿಕೃತ ಮರಣ ಪ್ರಮಾಣ ಪತ್ರ ಹಾಗೂ ಕುಂದು ಕೊರತೆ ಪರಿಹಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಗಳನ್ನು 30 ದಿನಗಳೊಳಗಾಗಿ ವಿಲೇವಾರಿಗೆ ಕ್ರಮವಹಿಸುವುದು.ಈ ಆದೇಶ ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅರ್ಜಿ ಹಾಗೂ ದಾಖಲೆ ಪಡೆದ 30 ದಿನಗಳೊಳಗಾಗಿ ಪರಿಹಾರ ಹಣ ವಿತರಿಸಲು ಕ್ರಮವಹಿಸಬೇಕೆಂದು ಆದೇಶ ಹೊರಡಿಸಲಾಗಿದೆ.